ಅಭಿಮಾನಿಗಳಿಗೆ ಬಿಗ್‌ ಶಾಕ್‌, ಭಾರತ ಬಿಟ್ಟು ಹೋಗಲಿದ್ದಾರಾ ವಿರಾಟ್‌ ಕೊಹ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿರಾಟ್‌ ಕೊಹ್ಲಿ ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಲು ಮುಂದಾಗಿದ್ದಾರಾ? ಹೀಗೊಂದು ಅನುಮಾನ ಹುಟ್ಟಿದೆ. ಇದಕ್ಕೆ ಕೊಹ್ಲಿ ನಡೆಯೇ ಕಾರಣವಾಗಿದೆ..

ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ರಜೆ ಪಡೆದುಕೊಂಡ ವಿರಾಟ್​ ಕೊಹ್ಲಿ ನೇರವಾಗಿ ಲಂಡನ್​ಗೆ ಹಾರಿದ್ರು. ಅದಕ್ಕೂ ಮುನ್ನವೇ ಅನುಷ್ಕಾ ಶರ್ಮಾ ಲಂಡನ್​ನಲ್ಲಿ ಬೀಡು ಬಿಟ್ಟಿದ್ರು. ಅನುಷ್ಕಾ ಮಗ ಅಕಾಯ್​ ಜನ್ಮ ನೀಡಿದ್ದೂ ಕೂಡ ಅಲ್ಲೇ..

ಅಕಾಯ್​ ಹುಟ್ಟಿನ ಬಳಿಕವೂ ಕೆಲ ತಿಂಗಳು ವಿರುಷ್ಕಾ ಜೋಡಿ ಅಲ್ಲೇ ವಾಸವಾಗಿತ್ತು. ಆಮೇಲೆ ಐಪಿಎಲ್​ ವೇಳೆ ಕೊಹ್ಲಿ ಭಾರತಕ್ಕೆ ಆಗಮಿಸಿದ್ರೆ, ನಂತರದಲ್ಲಿ ಭಾರತಕ್ಕೆ ಬಂದಿದ್ದ ಅನುಷ್ಕಾ ಮತ್ತೆ ವಾಪಸ್​​ ಲಂಡನ್​ಗೆ ತೆರಳಿದ್ರು. ಹೀಗಾಗಿ ಈ ಜೋಡಿ ಅಲ್ಲೇ ಸೆಟಲ್‌ ಆಗೋ ಯೋಚ್ನೆ ಮಾಡಿದ್ಯಾ ಅನ್ನೋದು ಅಭಿಮಾನಿಗಳ ಊಹೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!