ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್ ಶಾಕ್: ರಾಜ್ಯಕ್ಕೆ ಇನ್ನೂ ಒಂದು ವಾರ ವಿಳಂಬ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬೇಸಿಗೆಯ ಬಿಸಿಲು ಕಳೆದು ಮುಂಗಾರು ಮಳೆಯ ಮುನ್ಸೂಚನೆಯಲ್ಲಿ ರೈತರು ಮುಗಿಲು ನೋಡುತ್ತಿದ್ದಾರೆ. ಈ ರೈತರಿಗೆ ಬಿಗ್ ಶಾಕ್ ಎನ್ನುವಂತೆ ಕರ್ನಾಟಕಕ್ಕೆ ಮುಂಗಾರು ಪ್ರವೇಶ ಇನ್ನೂ ಒಂದು ವಾರ ವಿಳಂಬ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ ಕೇರಳಕ್ಕೆ ಮುಂಗಾರು ಇನ್ನೂ ಪ್ರವೇಶಿಸಿಲ್ಲ. ಹೀಗಾಗಿ ಕರ್ನಾಟಕಕ್ಕೂ ಮುಂಗಾರು ಆಗಮನ ಒಂದು ವಾರ ತಡವಾಗುವ ಸಾಧ್ಯತೆ ಇದೆ ಎಂದಿದೆ.

ಅಂದಹಾಗೆ ಕೇರಳಕ್ಕೆ ಮುಂಗಾರು ಪ್ರವೇಶಿಸಿದ 3-4 ದಿನಗಳಲ್ಲಿ ಕರ್ನಾಟಕಕ್ಕೂ ಮುಂಗಾರು ಮಳೆ ಪ್ರವೇಶಿಸಲಿದೆ. ಆದ್ರೇ ಕೇರಳಕ್ಕೆ ತಡವಾಗಿ ಮುಂಗಾರು ಪ್ರವೇಶಿಸುವುದರಿಂದ, ಕರ್ನಾಟಕಕ್ಕೆ ಇನ್ನೂ ಒಂದು ವಾರ ವಿಳಂಬವಾಗಿ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!