ಸಚಿವ ಎಂ.ಬಿ ಪಾಟೀಲ್ ಗೆ ಅಧಿಕಾರದ ಮದ ಏರಿದೆ: ನಳಿನ್ ಕಿಡಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇನ್ಮುಂದೆ ಚಕ್ರವರ್ತಿ ಸೂಲಿಬೆಲಿ ಅವರ ಆಟ ನಡೆಯುವುದಿಲ್ಲ. ಅವರು ಮಾಡಿದಂತ ಅವಾಂತರಗಳನ್ನು ಈಗ ಸರಿ ಪಡಿಸುತ್ತಿದ್ದೇವೆ. ಗಲಾಟೆ ಮಾಡಿದರೆ ಜೈಲೆ ಗತಿ ಎಂಬುದಾಗಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದರು. ಇದರಿಂದ ಸಿಟ್ಟಿಗೆದ್ದಿರುವ ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಎಂ.ಬಿ ಪಾಟೀಲ್ ಗೆ ಅಧಿಕಾರದ ಮದ ಏರಿದೆ ಎಂದು ಗುಡುಗಿದ್ದಾರೆ.

ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಎಂ.ಬಿ ಪಾಟೀಲ್ ಅವರಿಗೆ ಅಧಿಕಾರದ ಮದ ಏರಿದೆ. ಸಮಾಜದಲ್ಲಿ ಶಾಂತಿ ಕದಡುವವರನ್ನು, ಕುಕ್ಕರ್ ನಲ್ಲಿ ಬಾಂಬ್ ಸ್ಫೋಟಿಸುವವರನ್ನು ತಮ್ಮ ಸಹೋದರರು ಎನ್ನುವ ಕಾಂಗ್ರೆಸ್ ನಾಯಕರು, ರಾಷ್ಟ್ರೀಯವಾದಿಗಳನ್ನು ಜೈಲಿಗೆ ಹಾಕುತ್ತೇವೆ ಎನ್ನುವುದು ತುಘಲಕ್ ಆಡಳಿತದ ಮುನ್ಸೂಚನೆಯಾಗಿದೆ. ಕಾಂಗ್ರೆಸ್ ನಾಯಕರ ಈ ದರ್ಪದ ಮಾತುಗಳು ಜಾಸ್ತಿ ದಿನ ಉಳಿಯದು ಎಂದರು.

ಭಾರತೀಯ ಗೋ ಸಂಪತ್ತನ್ನು ರಕ್ಷಿಸುವುದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ 48ನೇ ಅಧಿನಿಯಮದ ಆಶಯವಾಗಿತ್ತು. ಆದರೆ ಅಧಿಕಾರಕ್ಕೆ ಬಂದ ಕೂಡಲೇ ಗೋವುಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಸಚಿವರಿಗೆ ಓಲೈಕೆಯೇ ಆಶಯ. ಗೋಹತ್ಯೆ ನಿಷೇಧ ಕಾಯ್ದೆಯನ್ನು ನಿಷೇಧಿಸುವ ಹಂತಕ್ಕೆ ಇಳಿದರೆ ಭೀಕರ ಪರಿಣಾಮ ಎದುರಿಸಬೇಕಾದಿತು ಎಂದು ಎಚ್ಚರಿಸಿದ್ದಾರೆ.

https://twitter.com/nalinkateel/status/1665591258817916930?ref_src=twsrc%5Etfw%7Ctwcamp%5Etweetembed%7Ctwterm%5E1665591258817916930%7Ctwgr%5E1e9d7b286c0a213981cfb422a9d68fbd4541aec9%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fkannadanewsnow-epaper-kanowcom%2Fhomee-updates-homee%3Fmode%3Dpwaaction%3Dclick

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!