April 10, 2026
Friday, April 10, 2026
spot_img

LSGಗೆ ದೊಡ್ಡ ಶಾಕ್: ಪ್ರಮುಖ ಸ್ಪಿನ್ನರ್ ಐಪಿಎಲ್‌ನಿಂದ ಔಟ್, ಮುಂದೆ ತಂಡ ಸೇರ್ಕೊಳೋದು ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ 2026ರಲ್ಲಿ ಉತ್ತಮ ಆರಂಭ ಪಡೆದಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ದೊಡ್ಡ ಹಿನ್ನಡೆ ಎದುರಾಗಿದೆ. ತಂಡದ ಪ್ರಮುಖ ಸ್ಪಿನ್ನರ್ ವನಿಂದು ಹಸರಂಗ ಗಾಯದ ಕಾರಣದಿಂದ ಈ ಸೀಸನ್‌ನಿಂದ ಹೊರಬಿದ್ದಿದ್ದಾರೆ. ಮೊದಲ ಪಂದ್ಯದಲ್ಲಿ ಸೋಲು ಕಂಡಿದ್ದರೂ, ನಂತರದ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ ಆತ್ಮವಿಶ್ವಾಸದಲ್ಲಿದ್ದ ತಂಡಕ್ಕೆ ಇದು ದೊಡ್ಡ ಆಘಾತವಾಗಿದೆ.

ಈ ವಿಚಾರವನ್ನು ತಂಡದ ನಿರ್ದೇಶಕ ಟಾಮ್ ಮೂಡಿ ದೃಢಪಡಿಸಿದ್ದು, ಮುಂದಿನ 24 ರಿಂದ 48 ಗಂಟೆಗಳಲ್ಲಿ ಬದಲಿ ಆಟಗಾರರ ಹೆಸರನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಹರಾಜಿನಲ್ಲಿ ಹಸರಂಗಾ ಅವರನ್ನು ₹2 ಕೋಟಿ ಮೂಲ ಬೆಲೆಗೆ ಲಕ್ನೋ ಖರೀದಿಸಿತ್ತು.

ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ಎಡ ಹ್ಯಾಮ್‌ಸ್ಟ್ರಿಂಗ್ ಗಾಯಗೊಂಡಿದ್ದ ಹಸರಂಗಾ ಅದರಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಿಲ್ಲ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗದ ಆಟಗಾರರಿಗೆ ಎನ್‌ಒಸಿ ನೀಡುವುದಿಲ್ಲ ಎಂಬ ನಿಯಮದಿಂದ ಅವರು ಐಪಿಎಲ್‌ಗೆ ಸೇರುವ ಅವಕಾಶ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:

ವರದಿಗಳ ಪ್ರಕಾರ, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾರ್ಜ್ ಲಿಂಡಾ ಹಸರಂಗಾ ಬದಲಿಗೆ ಸೇರುವ ಸಾಧ್ಯತೆ ಹೆಚ್ಚಾಗಿದೆ. ಎಡಗೈ ಸ್ಪಿನ್ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಾಮರ್ಥ್ಯ ಹೊಂದಿರುವ ಲಿಂಡೆ, ಲಕ್ನೋಗೆ ಹೆಚ್ಚುವರಿ ಬಲ ನೀಡುವ ನಿರೀಕ್ಷೆಯಿದೆ.

ಇದೀಗ ಲಕ್ನೋ ತಂಡ ಬದಲಿ ಆಟಗಾರರ ಘೋಷಣೆಯತ್ತ ಅಭಿಮಾನಿಗಳ ಗಮನ ಕೇಂದ್ರೀಕೃತವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !