May 5, 2026
Tuesday, May 5, 2026
spot_img

ಪಿಯು ಬೋರ್ಡ್‌ ಫಲಿತಾಂಶದಲ್ಲಿ ಮಹಾ ಎಡವಟ್ಟು, 600ಕ್ಕೆ 683 ಅಂಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಿನ್ನೆಯಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಕೆಲವು ವಿದ್ಯಾರ್ಥಿಗಳು ಫೇಲ್‌ ಆಗಿದ್ದರೆ, ಹಲವು ವಿದ್ಯಾರ್ಥಿಗಳು ಔಟ್‌ ಆಫ್‌ ಔಟ್‌ ತೆಗೆದಿದ್ದಾರೆ.

ಆದರೆ ಕೆಲವರಲ್ಲಿ ಕೆಲವು ವಿದ್ಯಾರ್ಥಿಗಳು ಮಾತ್ರ 600 ಅಂಕಗಳ ಪರೀಕ್ಷೆಯಲ್ಲಿ 683 ಅಂಕಗಳನ್ನು ಸ್ಕೋರ್‌ ಮಾಡಿದ್ದಾರೆ.

ಹೌದು, ಇದು ತಮಾಷೆ ವಿಷಯ ಅಲ್ಲವೇ ಅಲ್ಲ. ಬೋರ್ಡ್‌ನ ಎಡವಟ್ಟು ಹಾಗೂ ತಾಂತ್ರಿಕ ದೋಷದಿಂದಾಗಿ ಕೆಲವು ಮಕ್ಕಳಿಗೆ 683 ಅಂಕಗಳು ಸಿಕ್ಕಿವೆ. ಇದರಿಂದಾಗಿ ಪೋಷಕರು ಗೊಂದಲದಲ್ಲಿದ್ದಾರೆ. ತಮ್ಮ ಮಕ್ಕಳು ನಿಜವಾಗಿಯೂ ಎಷ್ಟು ಅಂಕ ತೆಗೆದಿದ್ದಾರೆ ಎಂದು ಚಡಪಡಿಸುತ್ತಿದ್ದಾರೆ.

ಕಳೆದ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದ ಕೆಲ ವಿದ್ಯಾರ್ಥಿಗಳು ಈ ವರ್ಷ ಮರು ಪರೀಕ್ಷೆ ಬರೆದಿದ್ದರು. ಈ ವಿದ್ಯಾರ್ಥಿಗಳ ಫಲಿತಾಂಶವೂ ನಿನ್ನೆ ಪ್ರಕಟವಾಗಿದ್ದು, ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಈ ರೀತಿಯ ಎಡವಟ್ಟು ನಡೆದಿರುವುದು ಮುಜುಗರ ತಂದಿದೆ. ಕೆಲ ವಿದ್ಯಾರ್ಥಿಗಳಿಗೆ ಆರು ವಿಷಯಗಳಲ್ಲೂ 100ಕ್ಕೂ ಹೆಚ್ಚು ಅಂಕಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಪಿಯುಸಿ ಬೋರ್ಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಮಸ್ಯೆಯಾಗಿ ಹೆಚ್ಚು ಅಂಕ ಕಾಣಿಸಿದೆ. ಆದರೆ ಡಿಜಿಲಾಕರ್‌ನಲ್ಲಿ ಮಾರ್ಕ್ಸ್‌ಕಾರ್ಡ್‌ ಡೌನ್‌ಲೋಡ್‌ ಮಾಡಿದಾಗ ಸರಿಯಾದ ಅಂಕಗಳು ಕಾಣಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !