Friday, June 9, 2023

Latest Posts

ರಾಹುಲ್‌ ಗಾಂಧಿಗೆ ಬಿಗ್ ಶಾಕ್: ಮನೆ ಖಾಲಿ ಮಾಡಿ ಎಂದು ಬಂತು ನೊಟೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಹುಲ್‌ ಗಾಂಧಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದ್ದು, ಲೋಕಸಭೆ ತನ್ನ ಸದಸ್ಯ ಸ್ಥಾನದಿಂದ ಅನರ್ಹ ವಾದ ಬೆನ್ನಲ್ಲೇ ಲೋಕಸಭಾ ಸದಸ್ಯರಗೆ ನೀಡಲಾಗುವ ಸರ್ಕಾರಿ ವಸತಿಯನ್ನು ಖಾಲಿ ಮಾಡುವಂತೆ ಲೋಕಸಭೆ ವಸತಿ ಸಮಿತಿ ನೋಟಿಸ್‌ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

2004ರಲ್ಲಿ ರಾಹುಲ್‌ ಗಾಂಧಿ ಮೊದಲ ಬಾರಿಗೆ ಲೋಕಸಭೆ ಸದಸ್ಯರಾಗು ಆಯ್ಕೆಯಾಗಿದ್ದಾಗ ಕಾಂಗ್ರೆಸ್‌ ನಾಯಕನಿಗೆ ದೆಹಲಿಯ ಲುಟೇನ್ಸ್‌ನ ತುಘಲಕ್‌ ಲೇನ್‌ನ ನಂ.12 ವಸತಿಯನ್ನು ನೀಡಲಾಗಿತ್ತು. ಉತ್ತರ ಪ್ರದೇಶದ ಅಮೇಥಿಯಿಂದ ಅವರು ಸಂಸದರಾಗಿ ಆಯ್ಕೆಯಾಗಿದ್ದರು.

2019ರ ಚುನಾವಣೆಯಲ್ಲಿ ಅಮೇಥಿ ಸೀಟ್‌ನಲ್ಲಿ ರಾಹುಲ್‌ ಗಾಂಧಿ ಸೋಲು ಕಂಡರೆ, ಅದೇ ವರ್ಷ ಚುನಾವಣೆ ಪ್ರಚಾರದಲ್ಲಿ ಮಾಡಿದ್ದ ಒಂದು ಕಾಮೆಂಟ್‌, ಪ್ರತಿಷ್ಠಿತ ಸ್ಥಳದಲ್ಲಿದ್ದ ಇವರ ವಿಳಾಸವನ್ನೂ ಬದಲಿಸಲಿದೆ. ರಾಹುಲ್‌ ಗಾಂಧಿ ತಮ್ಮ ಮನೆಯನ್ನು ಏಪ್ರಿಲ್‌ 22ರ ಒಳಗಾಗಿ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!