ಮನೆ ಇಲ್ಲದವರಿಗೆ 2 ಬಿಹೆಚ್‌ಕೆ ಮನೆ: ಜನಾರ್ಧನ ರೆಡ್ಡಿಯಿಂದ ಪಕ್ಷದ ಚಿಹ್ನೆ- ಪ್ರಣಾಳಿಕೆ ಬಿಡುಗಡೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (ಕೆಆರ್‌ಪಿಪಿ) ಸಂಸ್ಥಾಪಕ ಅಧ್ಯಕ್ಷ ಜನಾರ್ಧನ ರೆಡ್ಡಿ ಇಂದು ಬೆಂಗಳೂರಿನಲ್ಲಿ ಪಕ್ಷದ ಅಧಿಕೃತ ‘ಫುಟ್ಬಾಲ್‌’ ಚಿಹ್ನೆ ಹಾಗೂ ‘ಪ್ರಣಾಳಿಕೆ’ಯನ್ನು ಬಿಡುಗಡೆ ಮಾಡಿದರು.

ಈ ಕುರಿತು ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಪಕ್ಷದ ಚಿಹನೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. 2022ರ ಡಿಸೆಂಬರ್ 25 ರಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಘೋಷಣೆ ಮಾಡಲಾಗಿತ್ತು. ಪಕ್ಷಕ್ಕೆ ಎಲ್ಲಾ ಕಡೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾತ್ರಿ 2 ಗಂಟೆಯಾದರೂ ನಮಗೆ ಗ್ರಾಮೀಣ ಪ್ರದೇಶಗಳಲ್ಲಿ ಜನ ಕಾಯುತ್ತಿದ್ದಾರೆ. 12 ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಘೋಷಣೆ ಆಗಿದೆ. ಕೆಲವೇ ದಿನಗಳಲ್ಲಿ ಇನ್ನೂ 19 ಕ್ಷೇತ್ರದ ಅಭ್ಯರ್ಥಿ ಘೋಷಣೆ ಆಗಲಿದೆ. ಇಂದು ಪಕ್ಷದ ಚಿಹ್ನೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ರಾಜಕೀಯದಲ್ಲಿ ಸ್ನೇಹಿತರು, ಶತ್ರುಗಳು ಎಲ್ಲರೂ ಸೇರಿಕೊಂಡು ನನ್ನನ್ನ ಫುಟ್ ಬಾಲ್ ತರ ಆಡಿದ್ದಾರೆ. ಈಗ ನನಗೆ ಫುಟ್‌ಬಾಲ್‌ ಸಿಕ್ಕಿದ್ದು, ಎಲ್ಲರನ್ನು ಸೇರಿಸಿ ಫುಟ್ ಬಾಲ್ ಆಡಬಹುದು ಎಂದು ಈ ಚಿಹ್ನೆಯನ್ನ ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.

ಜನಾರ್ದನ ರೆಡ್ಡಿಗೆ ಹೊಸ ಪಕ್ಷ ಚಿಹ್ನೆ ಟೆನ್ಷನ್‌ ಶುರು ಆಗಿದ್ದು, ಸ್ನೇಹ ಹಸ್ತದ ಚಿಹ್ನೆ ಪಡೆಯಲು ಜನಾರ್ದನ ರೆಡ್ಡಿ ಹೋರಾಟ ಮಾಡುತ್ತಿದ್ದಾರೆ. ಪರಸ್ಪರ ಎರಡು ಕೈ ಜೋಡಿಸಿರುವ ಚಿಹ್ನೆ ಪಡೆಯಲು ರೆಡ್ಡಿ ಕಸರತ್ತು ಮಾಡುತ್ತಿದ್ದು, ಬೇಡಿಕೆಗೆ ಚುನಾವಣಾ ಆಯೋಗ ಹಿಂದೇಟು ಹಾಕಿದೆ. ಇನ್ನು 1 ತಿಂಗಳಿಂದ ‘ಕೈ ಜೋಡಿಸುವ’ (ಸ್ನೇಹಹಸ್ತ) ಚಿಹ್ನೆಗಾಗಿ ರೆಡ್ಡಿ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಚುನಾವಣಾ ಆಯೋಗ 25 ಹೊಸ ಚಿಹ್ನೆಗಳನ್ನು ಸೂಚಿಸಿತ್ತು. ಅದರಲ್ಲಿ ಫುಟ್‌ಬಾಲ್‌ ಚಿಹ್ನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಪ್ರಣಾಳಿಕೆ ಬಿಡುಗಡೆ:

  • ಪ್ರತಿ ಮನೆಗೆ 250 ಯೂನಿಟ್ ವಿದ್ಯುತ್ ಉಚಿತ
  • ಎಸ್‌ಟಿ, ಎಸ್‌ಸಿ ಉಚಿತ ನಿವೇಶನ
  • 5 ಎಕರೆಗಿಂತ ಕಡಿಮೆ ಇದ್ರೆ ರೈತರಿಗೆ ಬಂಡವಾಳದ 15 ಸಾವಿರ ರೂ ನರೆವು
  • ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದು
  • ಹೆಣ್ಣು ಮಕ್ಕಳ ಹೆಸರಿನಲ್ಲಿ ಮನೆ ಇಲ್ಲದೆ ಇರುವವರಿಗೆ 2 ಬಿಹೆಚ್‌ಕೆ ಮನೆ
  • ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ವೇತನ
  • ವಿದ್ಯಾರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ
  • ಮಹಿಳೆಯರ ಭದ್ರತೆಗಾಗಿ ಹೊಸ ಮಹಿಳೆಯರ ತಂಡ ಸ್ಥಾಪನೆ
  • ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ 1000 ವೇತನ ಹೆಚ್ಚಳ
  • ಆರ್ಥಿಕ ದೌರ್ಬಲ್ಯ ಮಕ್ಕಳಿಗೆ ಉಚಿತ ಶಿಕ್ಷಣ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!