ಉಬರ್‌ ಬುಕ್‌ ಮಾಡುವರಿಗೆ ಬಿಗ್ ಶಾಕ್: ಪ್ರಯಾಣ ದರದಲ್ಲಿ ಹೆಚ್ಚಳ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದಿನೇ ದಿನೇ ಇಂಧನ ಬೆಲೆ ಹೆಚ್ಚುತ್ತಿರುವ ಹಿನ್ನೆಲೆ ಬೆಂಗಳೂರಿನ ಉಬರ್ ಕ್ಯಾಬ್ ರೈಡ್‌ಗಳು ಶೇ. 10 ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಪ್ರಯಾಣಿಕರಿಗೆ ಶಾಕ್ ನೀಡಿದೆ.
ಈ ಕುರಿತು ಅಧಿಕೃತವಾಗಿ ಘೋಷಿಸಿದಉಬರ್ ಭಾರತೀಯ ಶಾಖೆಯು , ನಾವು ಚಾಲಕರ ಪ್ರತಿಕ್ರಿಯೆಗಳನ್ನು ಆಲಿಸಿದ್ದೇವೆ. ತೈಲ ಬೆಲೆಗಳು ದಿನೇ ದಿನೇ ಹೆಚ್ಚುತ್ತಿರುವುದು ಅವರಲ್ಲಿ ಆತಂಕ ಮೂಡಿಸಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆ. ಈ ನಷ್ಟದಿಂದ ಚಾಲಕರನ್ನು ಪಾರು ಮಾಡಲು ಬೆಂಗಳೂರಿನಲ್ಲಿ ನಾವು ಪ್ರಯಾಣ ದರವನ್ನು ಶೇ.10ರಷ್ಟು ಹೆಚ್ಚಿಸಲು ನಿರ್ಧರಿಸಿದ್ದೇವೆ ಎಂದು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಕೇಂದ್ರೀಯ ಕಾರ್ಯಾಚರಣೆಗಳ ಮುಖ್ಯಸ್ಥ ನಿತಿಶ್ ಭೂಷಣ್ ಹೇಳಿದ್ದಾರೆ.
ಮಾರ್ಚ್ 21ರಂದು ಲೀಟರ್‌ಗೆ ರೂ. 100.58 ಹಾಗೂ ರೂ. 85.01 ಇದ್ದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಏ.8ರ ವೇಳೆಗೆ ಕ್ರಮವಾಗಿ 111.09 ರೂ. ಹಾಗೂ 94.79ಕ್ಕೆ ಏರಿಕೆಯಾಗಿವೆ. ಮುಂದಿನ ದಿನಗಳಲ್ಲೂ ತೈಲ ಬೆಲೆ ಏರಿಕೆಯ ಮೇಲೆ ನಾವು ನಿಗಾ ಇರಿಸಿ, ಮುಂದೆ ಅಗತ್ಯಾನುಸಾರ ಕ್ರಮ ಕೈಗೊಳ್ಳುತ್ತೇವೆ ಎಂದೂ ಭೂಷಣ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!