ಬಹುದೊಡ್ಡ ಅಗ್ನಿಪರೀಕ್ಷೆ: ಇಂದು ಚಂದ್ರನ ಕಕ್ಷೆಗೆ ಸೇರಲಿದೆ ಚಂದ್ರಯಾನ-3

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಭಾರತಕ್ಕೆ ಬಹುಮಹತ್ವದ ದಿನ, ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಚಂದ್ರನ ಕಕ್ಷೆಗೆ ಸೇರ್ಪಡೆಯಾಗುವ ದಿನವಾಗಿದೆ.

ಈಗಾಗಲೇ ಚಂದ್ರಯಾನ ನೌಕೆ ನಿಗದಿತ ಪ್ರಯಾಣದಲ್ಲಿ ಮೂರನೇ ಎರಡರಷ್ಟು ಹಾದಿ ಕ್ರಮಿಸಿದ್ದು, ಇಂದು ಸಂಜೆ ಏಳು ಗಂಟೆ ವೇಳೆಗೆ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಲಿದೆ. ಈಗಾಗಲೇ ನೌಕೆ ಭೂಮಿಯನ್ನು ಐದು ಸುತ್ತು ಸುತ್ತಿ ಕಕ್ಷೆಯನ್ನು ಪೂರ್ಣಗೊಳಿಸಿ, ಚಂದ್ರನಿಗೆ ಸಮೀಪವಾಗಿದೆ. ಲೂನಾರ್ ಟ್ರಾನ್ಸ್‌ಫರ್ ಪ್ರಾಜೆಕ್ಟರಿ ಪಥದಲ್ಲಿ ಗಗನನೌಕೆ ಸಾಗುತ್ತಿದೆ.

ಇಸ್ರೋ ನೌಕೆಯನ್ನು ಟ್ರಾನ್ಸ್‌ಲೂನರ್ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದು, ಈವರೆಗೂ ಯಾವುದೇ ಅಡೆತಡೆಗಳಿಲ್ಲದೆ ನೌಕೆ ಮುಂದೆ ಸಾಗಿದೆ. ಇಂದು ಚಂದ್ರನ ಕಕ್ಷೆಗೆ ನೌಕೆಯನ್ನು ಸೇರಿಸಲು ದ್ರವ ಇಂಜಿನ್‌ನ್ನು ಮತ್ತೆ ಉರಿಸಲಾಗುತ್ತದೆ. ನೌಕೆಯು ಚಂದ್ರನ ಸುತ್ತ ನಾಲ್ಕು ಬಾರಿ ಸುತ್ತುತ್ತದೆ. ಪ್ರತೀ ಬಾರಿ ಸುತ್ತಿದಾಗಲೂ ಚಂದ್ರನಿಗೆ ಇನ್ನಷ್ಟು ಹತ್ತಿರವಾಗಲಿದೆ.

ಆಗಸ್ಟ್ 17ರಂದು ಪ್ರೊಪಲ್ಷನ್ ಮಾಡ್ಯೂಲ್ ಹಾಗೂ ಲ್ಯಾಂಡರ್ ಮಾಡ್ಯೂಲ್ ಬೇರ್ಪಡಿಸಲಾಗುತ್ತದೆ. ಆ.23ರಂದು ಸಂಜೆ ಲ್ಯಾಂಡರ್ ಚಂದ್ರನ ಮೇಲ್ಮೈನ ದಕ್ಷಿಣ ಧ್ರುವದ ಬಳಿ ಸುರಕ್ಷಿತವಾಗಿ ಲ್ಯಾಂಡ್ ಆಗುತ್ತದೆ.

ನಂತರ ಇದು ಚಂದ್ರನ ಮೇಲ್ಮೈನಲ್ಲಿ ಒಂದು ದಿನ ಅಂದರೆ ಭೂಮಿಯ ಮೇಲೆ 14 ದಿನದ ಲೆಕ್ಕದವರೆಗಿನ ಡೇಟಾ ಸಂಗ್ರಹಣೆ ಮಾಡುತ್ತದೆ. ಚಂದ್ರನ ಮೇಲ್ಮೈ ವಾತಾವರಣ, ಗುಣಲಕ್ಷಣಗಳು, ವಾಸಯೋಗ್ಯತೆ ಬಗೆಗಿನ ಡೇಟಾ ಸಂಗ್ರಹ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!