ಹನಿಟ್ರ್ಯಾಪ್​​ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೊನೆಗೂ ಗೃಹ ಸಚಿವರಿಗೆ ದೂರು ನೀಡಿದ ರಾಜಣ್ಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿರುವ ಸಚಿವ​ ರಾಜಣ್ಣ ಆರೋಪಿಸಿರುವ ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕೊನೆಗೂ ರಾಜಣ್ಣ ದೂರು ನೀಡಿದ್ದಾರೆ.

ಹನಿಟ್ರ್ಯಾಪ್​ ಯತ್ನ ನಡೆದಿರುವ ಬಗ್ಗೆ ಬಹಿರಂಗ ಪಡಿಸಿದ್ದರೂ ಇಲ್ಲಿಯವರೆಗೆ ದೂರು ನೀಡಿರಲಿಲ್ಲ. ಆದ್ರೆ, ಈಗ ಗೃಹ ಸಚಿವ ಅವರ ನಿವಾಸಕ್ಕೆ ಭೇಟಿ ನೀಡಿ ಅಧಿಕೃತವಾಗಿ ದೂರು ನೀಡಿದ್ದಾರೆ.

ಇನ್ನು ಹನಿಟ್ರ್ಯಾಪ್​ ಬಗ್ಗೆ ಕೆಲವು ಸುಳಿವನ್ನ ಬಿಟ್ಟುಕೊಟ್ಟಿರುವ ರಾಜಣ್ಣ ಇಂದು ದೂರು ನೀಡಬೇಕೆಂದು ತೀರ್ಮಾನ ಮಾಡಿದ್ದರು. ಗೃಹ ಸಚಿವ ಪರಮೇಶ್ವರ್ ಎಲ್ಲೇ ಇದ್ದರೂ ಹುಡುಕಿಕೊಂಡು ಹೋಗಿ ದೂರು ಕೊಡುತ್ತೇನೆ ಎಂದು ಹೇಳಿದ್ದರು ಅದರಂತೆ ಇದೀಗ ರಾಜಣ್ಣ ಪರಮೇಶ್ವರ್​ ಅವರ ನಿವಾಸಕ್ಕೆ ಭೇಟಿ ನೀಡಿ ದೂರು ನೀಡಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!