ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆ ಮೇಲೆ ಡಾಬರ್‌ಮ್ಯಾನ್ ಹಾಗೂ ಪಿಟ್‌ಬುಲ್ ಸಾಕು ನಾಯಿಗಳು ದಾಳಿ ಮಾಡಿದ್ದು, ಪರಿಣಾಮ ಆಕೆಯ ಮುಖಕ್ಕೆ 20 ಸ್ಟಿಚ್ ಹಾಕಿರುವ ಘಟನೆ ಮುಂಬೈನ ಪೋವೈ ಹೌಸಿಂಗ್ ಸೊಸೈಟಿ ಬಳಿ ನಡೆದಿದೆ.
37 ವರ್ಷದ ರೀಚಾ ಸಂಚಿತ್ ಕೌಶಿಕ್ ಸಿಂಗ್ ಅರೋರ ಎಂಬ ಮಹಿಳೆ ಅಪಾರ್ಟ್ಮೆಂಟ್‌ನಿಂದ ತೆರಳುತ್ತಿದ್ದಾಗ ಡಾಬರ್‌ಮ್ಯಾನ್ ಹಾಗೂ ಪಿಟ್‌ಬುಲ್ ನಾಯಿಗಳು ದಾಳಿ ಮಾಡಿದೆ. ರಿಚಾ ತನ್ನ ಅಪಾರ್ಟ್ಮೆಂಟ್‌ನಿಂದ ಹೊರಗೆ ಹೋಗುತ್ತಿದ್ದಾಗ ಎರಡು ನಾಯಿಗಳು ಇದ್ದಕ್ಕಿದ್ದಂತೆ ದಾಳಿ ಮಾಡಿದೆ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ರಿಚಾರನ್ನು, ಆಕೆಯ ಮಾವ ಮತ್ತು ಸ್ಥಳೀಯ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಖದ ಭಾಗಕ್ಕೆ ತೀವ್ರ ಗಾಯಗಳಾಗಿದ್ದರಿಂದ ಮುಖಕ್ಕೆ 20 ಹೊಲಿಗೆಯನ್ನು ಹಾಕಲಾಗಿದೆ.
ಇನ್ನು ಈ ಕುರಿತು ಪೋವೈ ಪೊಲೀಸರು ನಾಯಿ ಮಾಲೀಕರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.