October 16, 2026
Friday, October 16, 2026
spot_img

ಶಕ್ತಿ ಯೋಜನೆಗೆ ಬಿಗ್ ಟ್ವಿಸ್ಟ್: ಇನ್ಮುಂದೆ ಇವರಿಗಷ್ಟೇ ಫ್ರೀ ಬಸ್ ಪ್ರಯಾಣ, ಸರ್ಕಾರದ ಹೊಸ ರೂಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಗೆ ದೊಡ್ಡ ಮಟ್ಟದ ಪರಿಷ್ಕರಣೆ ತರಲು ಸಾರಿಗೆ ಇಲಾಖೆ ಸಜ್ಜಾಗಿದೆ. ಉಚಿತ ಬಸ್ ಪ್ರಯಾಣದ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಬೇರೆ ರಾಜ್ಯಗಳ ಮಹಿಳೆಯರು ಪ್ರಯಾಣಿಸುತ್ತಿರುವ ದೂರುಗಳು ಹೆಚ್ಚಾಗಿದ್ದು, ಸಾರಿಗೆ ನಿಗಮಗಳ ಕೋಟ್ಯಂತರ ರೂಪಾಯಿ ನಷ್ಟ ತಡೆಯಲು ಸರ್ಕಾರ ಈಗ ಹೈಟೆಕ್ ಸ್ಮಾರ್ಟ್ ಕಾರ್ಡ್ ವಿತರಣೆಗೆ ಚುರುಕು ಮುಟ್ಟಿಸಿದೆ.

ವೋಟರ್ ಐಡಿ ಕಡ್ಡಾಯ

ಬೇರೆ ರಾಜ್ಯಗಳ ದುರುಪಯೋಗಕ್ಕೆ ಬ್ರೇಕ್ ಹಾಕಲು, ಕರ್ನಾಟಕದ ವೋಟರ್ ಐಡಿ (ಮತದಾರರ ಗುರುತಿನ ಚೀಟಿ) ಹೊಂದಿರುವ ರಾಜ್ಯದ ಮಹಿಳೆಯರಿಗೆ ಮಾತ್ರ ಈ ಸ್ಮಾರ್ಟ್ ಕಾರ್ಡ್ ನೀಡಲು ನಿರ್ಧರಿಸಲಾಗಿದೆ. ಫಲಾನುಭವಿಗಳು ಆಧಾರ್ ಮತ್ತು ವೋಟರ್ ಐಡಿ ನೀಡಿ ಈ ಕಾರ್ಡ್ ಪಡೆಯಬಹುದು. ಇದರಲ್ಲಿ ಹೆಸರು, ಫೋಟೋ, ವಿಳಾಸ ಇರಲಿದ್ದು, ಇದನ್ನು ಬೇರೆಯವರಿಗೆ ವರ್ಗಾಯಿಸಲು ಬರುವುದಿಲ್ಲ. ಒಟ್ಟು 3 ಕೋಟಿ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ.

ಮೆಟ್ರೋಗೂ ಬಳಸಬಹುದು ಈ NFC ಕಾರ್ಡ್!

ಈ ಯೋಜನೆ ಮೊದಲಿಗೆ ಬೆಂಗಳೂರಿನ ಬಿಎಂಟಿಸಿ (BMTC) ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದ್ದು, ಬಳಿಕ ಕೆಎಸ್ಆರ್‌ಟಿಸಿ ಸೇರಿದಂತೆ ಇತರೆ ನಿಗಮಗಳಿಗೆ ವಿಸ್ತರಣೆಯಾಗಲಿದೆ. ಬಿಎಂಟಿಸಿ ಈಗಾಗಲೇ 11,000 ಸುಧಾರಿತ ಇಟಿಎಂ (ETM) ಯಂತ್ರಗಳನ್ನು ಪಡೆದುಕೊಂಡಿದೆ. ಅತ್ಯಾಧುನಿಕ NFC (Near Field Communication) ತಂತ್ರಜ್ಞಾನ ಹೊಂದಿರುವ ಈ ಸ್ಮಾರ್ಟ್ ಕಾರ್ಡ್‌ಗಳನ್ನು ಬಸ್ ಮಾತ್ರವಲ್ಲದೆ, ‘ನಮ್ಮ ಮೆಟ್ರೋ’ ಸಂಚಾರಕ್ಕೂ ಬಳಸಬಹುದಾದ ಮಲ್ಟಿ-ಪರ್ಪಸ್ ಸೌಲಭ್ಯ ಕಲ್ಪಿಸಲಾಗುತ್ತಿದೆ.

Must Read