ಬಿಗ್ ಬಾಸ್ ಕನ್ನಡ 9 | ಕನ್ನಡ ಪರ ಹೋರಾಟಗಾರರಲ್ಲಿ ಕ್ಷಮೆ ಕೇಳಿದ ಪ್ರಶಾಂತ್ ಸಂಬರಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಗ್ ಬಾಸ್ ಕನ್ನಡ 9 ರಲ್ಲಿ ಇತ್ತೀಚೆಗೆ ಪ್ರಶಾಂತ್ ಸಂಬರಗಿ ಆಡಿದ್ದ ಮಾತು ಕನ್ನಡ ಪರ ಹೋರಾಟಗಾರರನ್ನು ಕೆರಳಿಸಿದ್ದು, ‘ಬಿಗ್ ಬಾಸ್’ ಮನೆ ಮುಂದೆ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡ ಬಿಗ್ ಬಾಸ್ ಟೀಮ್. ಪ್ರಶಾಂತ್ ಸಂಬರಗಿ ಅವರನ್ನು ಕನ್ಫೆಶನ್ ರೂಮ್‌ಗೆ ಕರೆಯುತ್ತಾರೆ. ಇಲ್ಲಿ ಕನ್ನಡ ಪರ ಹೋರಾಟಗಾರರಿಗೆ ಪ್ರಶಾಂತ್ ಸಂಬರಗಿ ಕ್ಷಮೆ ಕೇಳಿದ್ದಾರೆ.

ಕನ್ಫೆಶನ್ ರೂಮ್‌ ಒಳಗೆ ‘ಮಂಗಳವಾರ ರಾತ್ರಿ ನಿಮ್ಮ ಮತ್ತು ರೂಪೇಶ್ ರಾಜಣ್ಣ ಮಧ್ಯೆ ನಡೆದ ಮಾತುಕತೆಯಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ನೀವು ಆಡಿದ ಮಾತು ಮತ್ತು ಅದರ ಧಾಟಿ ಭಾಷೆಯನ್ನು ಪ್ರೀತಿಸುವ ಅನೇಕರಿಗೆ ನೋವು ಉಂಟುಮಾಡಿದೆ. ಭಾಷೆಯ ಪರವಾಗಿ ನಿಲ್ಲುವ ಅನೇಕ ಪ್ರಾಮಾಣಿಕ ಕನ್ನಡಿಗರು ನಮ್ಮ ನಡುವೆ ಇದ್ದಾರೆ ಎಂಬುದು ನಿಮ್ಮ ಅರಿವಿನಲ್ಲಿದೆ ಎಂದು ಬಿಗ್ ಬಾಸ್ ಭಾವಿಸುತ್ತಾರೆ’ ಎಂದು ಪ್ರಶಾಂತ್ ಸಂಬರಗಿ ಅವರಿಗೆ ಬಿಗ್ ಬಾಸ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಹೇಳುತ್ತಾರೆ.

ಅದಕ್ಕೆ ಪ್ರತಿಕ್ರಿಯಿಸಿದ ಸಂಬರಗಿ, ನಾನು ಆ ತರಹ ಹೇಳಲಿಲ್ಲ. ಅದು ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ. ನನ್ನ ಹಾಗೂ ರೂಪೇಶ್ ರಾಜಣ್ಣ ಅವರ ಮೈಂಡ್‌ ಗೇಮ್‌ನಲ್ಲಿ. ಆಟದ ರಭಸದಲ್ಲಿ ಹಾಗೆ ಹೇಳಿದ್ದೇನೆ. ಆದರೆ ನನ್ನ ಮಾತಿನಿಂದ ಕನ್ನಡ ಹೋರಾಟಗಾರರು, ಪ್ರೀತಿ ಮಾಡುವ ಕನ್ನಡಿಗರಿಗೆ ನೋವಾಗಿದ್ದರೆ.. ನಾನು ಕ್ಷಮೆ ಕೇಳುತ್ತೇನೆ. ಕರ್ನಾಟಕದ ಜನರಿಗೂ ನಾನು ಕ್ಷಮೆ ಕೇಳುತ್ತೇನೆ. ಈ ತರಹ ರಭಸದಿಂದ ಬಂದ ಮಾತು, ಒಬ್ಬರ ವಿರುದ್ಧ ನಡೆದಿತ್ತೇ ಹೊರತು ಇಡೀ ಕನ್ನಡ ಹೋರಾಟಗಾರರಿಗೆ ಇರಲಿಲ್ಲ. ದಯವಿಟ್ಟು ಕ್ಷಮೆ ಇರಲಿ ಎಂದಿದ್ದಾರೆ.

ಈ ತರಹ ಅರ್ಥ ಹೋಗಿದೆ ಅಂದ್ರೆ ನನ್ನಿಂದ ತಪ್ಪಾಗಿದೆ. ನಾನು ಆ ತರಹ ಮಾತನಾಡಬೇಕು ಅಂತ ಮಾತನಾಡಿಲ್ಲ. ರೂಪೇಶ್ ರಾಜಣ್ಣ ಅವರ ಮೈಂಡ್‌ನ ಕುಗ್ಗಿಸಬೇಕು ಅಂತ ಮಾಡಿದ್ದು. ಇದು ಈ ಪ್ರಮಾಣದಲ್ಲಿ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಮಾತನ್ನ ವಾಪಸ್ ತೆಗೆದುಕೊಳ್ಳುತ್ತೇನೆ. ಮಾತಿನ ಭರದಲ್ಲಿ ಹೇಳಿದ್ದು ನನ್ನಿಂದ ತಪ್ಪಾಗಿದೆ. ಅದಕ್ಕೆ ಕ್ಷಮೆ ಕೇಳುತ್ತಿದ್ದೇನೆ. ದಯವಿಟ್ಟು ಕ್ಷಮಿಸಬೇಕು ಅಂತ ನಿಮ್ಮಲ್ಲಿ ಕೇಳುತ್ತಿದ್ದೇನೆ ಎಂದಿದ್ದಾರೆ ಪ್ರಶಾಂತ್ ಸಂಬರಗಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!