ಟ್ವಿಟರ್‌ ನಿಂದ ಗೇಟ್ ಪಾಸ್: ಉದ್ಯೋಗಿ ಮಾಡಿದ ಟ್ವೀಟ್ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಲಾನ್ ಮಸ್ಕ್ ಒಡೆತನದ ಟ್ವಿಟರ್‌ನಲ್ಲಿ ಈಗಾಗಲೇ ಉದ್ಯೋಗಿಗಳನ್ನು ವಜಾ ಮಾಡುವ ಪ್ರಕ್ರಿಯೆ ಶುರುವಾಗಿದ್ದು, ಇದೀಗ ಭಾರತದ ಉದ್ಯೋಗಿಯೊಬ್ಬನಿಗೆ ಕೆಲಸದಿಂದ ತೆಗೆದು ಹಾಕಿದ ಮಾಹಿತಿ ನೀಡಲಾಗಿದೆ.

ಈ ಕುರಿತು ಆ ಉದ್ಯೋಗಿ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ವೈರಲ್ ಆಗಿದೆ.

25 ವರ್ಷದ ಯಶ್ ಅಗರ್ವಾಲ್ ಅವರು ಟ್ವಿಟರ್ ಉದ್ಯೋಗ ಕಳೆದುಕೊಂಡಿರುವ ಉದ್ಯೋಗಿ. ಸಾಮಾನ್ಯವಾಗಿ ಕೆಲಸ ಕಳೆದುಕೊಂಡಾಗ ದುಃಖದಲ್ಲಿರುತ್ತಾರೆ. ಆದರೆ, ಯಶ್ ಪಾಸಿಟಿವ್ ರೀತಿಯಲ್ಲಿ ನೋಡಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

Just got laid off ಎಂದು ಬರೆದುಕೊಂಡಿರುವ ಯಶ್ ಅಗರ್ವಾಲ್ ಅವರು, ಟ್ವಿಟರ್‌ ಕಂಪನಿಯಲ್ಲಿ ಕೆಲಸ ಮಾಡಿದ್ದು ಒಂದು ಸೌಭಾಗ್ಯ. ಕೆಲಸದಿಂದ ಈಗಷ್ಟೇ ವಜಾಗೊಂಡಿದ್ದೇನೆ. ಬರ್ಡ್ (ಟ್ವಿಟರ್) ಅಪ್ಲಿಕೇಶನ್, ಇದು ಸಂಪೂರ್ಣ ಗೌರವವಾಗಿದೆ. ಈ ತಂಡ, ಈ ಸಂಸ್ಕೃತಿಯ ಭಾಗವಾಗಲು ಇದುವರೆಗಿನ ಶ್ರೇಷ್ಠ ಸವಲತ್ತು ಎಂದು ಭಾವಿಸುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಎಲಾನ್ ಮಸ್ಕ್ ಅವರು ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದು ಹಾಕಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿಯೇ ಅನೇಕರಿಗೆ ಗೇಟ್‌ಪಾಸ್ ನೀಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!