ಬಿಗ್‌ ಬಾಸ್‌ ಮನೆಯಲ್ಲಿ ಮತ್ತೊಂದು ಎಲಿಮಿನೇಷನ್‌: ಕಡಿಮೆ ಓಟ್‌ ಪಡೆದ ಸ್ಪೂರ್ತಿ ಗೌಡ ಔಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬಿಗ್ ಬಾಸ್ OTT ಕನ್ನಡ ಎರಡನೇ ವಾರ ಮುಗಿಯುತ್ತಿದೆ. ವಾರಾಂತ್ಯದ ಸಂಚಿಕೆಯಲ್ಲಿ ಮತ್ತೊಂದು ಎಲಿಮಿನೇಷನ್‌ ನಡೆದಿದೆ. ಈ ವಾರ ಸ್ಪೂರ್ತಿ ಗೌಡ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ. ಈ ವಾರ ಒಟ್ಟು 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಇವರಲ್ಲಿ ಸ್ಪೂರ್ತಿ ಗೌಡ ಹೊರ ಹೊರಟಿದ್ದಾರೆ. ವೀಕ್ಷಕರಿಂದ ಅತಿ ಕಡಿಮೆ ಮತ ಪಡೆದು ಸ್ಪೂರ್ತಿ ಗೌಡ ಎಲಿಮಿನೇಟ್ ಆಗಿದ್ದಾರೆ. ಇದು ಬಿಗ್‌ ಬಾಸ್‌ ನ ಎರಡನೇ ಎಲಿಮಿನೇಷನ್ ಆಗಿದೆ.
ಈ ವಾರ ಸೋನು ಗೌಡ, ನಂದು, ಅಕ್ಷತಾ, ಸ್ಪೂರ್ತಿ ಗೌಡ, ಸನ್ಯಾ ಅಯ್ಯರ್, ಜಯಶ್ರೀ, ಸೋಮಣ್ಣ, ರಾಕೇಶ್ ಅಡಿಗ, ಆರ್ಯವರ್ಧನ್ ಗುರೂಜಿ ಅವರ ಮೇಲೆ ನಾಮಿನೇಷನ್ ತೂಗುಗತ್ತಿ ನೇತಾಡುತ್ತಿತ್ತು. ರಾಕೇಶ್ ಅವರು ಸೇಫ್ ಆಗಿದ್ದಾರೆ ಎಂದು ಸುದೀಪ್ ಮೊದಲಿಗೆ ಘೋಷಿಸಿದರು. ಆ ಬಳಿಕ ಆರ್ಯವರ್ಧನ್, ಸನ್ಯಾ, ಸೋಮಣ್ಣ, ನಂದಿನಿ, ಸೋನು ಶ್ರೀನಿವಾಸ್ ಗೌಡ, ಜಯಶ್ರೀ, ಅಕ್ಷತಾ ಸೇಫ್‌ ಎಂದು ಸುದೀಪ್ ಘೋಷಿಸಿದರು. ಮನೆಯಿಂದ ಸ್ಫೂರ್ತಿ ಹೊರಡುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡರು.
ಈ ವಾರದ ಟಾಸ್ಕ್‌ನಲ್ಲಿ ಸ್ಫೂರ್ತಿ ಗೌಡ ಉತ್ತಮವಾಗಿ ಆಡಲಿಲ್ಲ. ಸಣ್ಣ ವಿಚಾರಕ್ಕೆ ದೊಡ್ಡ ಗಲಾಟೆ ಮಾಡಿದರು. ಅಲ್ಲದೇ ಬಿಗ್ ಬಾಸ್ ಮನೆಯಲ್ಲಿ ಉಳಿಯಲು ತಮಗೆ ಆಸಕ್ತಿ ಇಲ್ಲ ಎಂದು ಪದೇ ಪದೇ ಹೇಳುತ್ತಲೇ ಇದ್ದರು. ಈ ವಿಚಾರದಲ್ಲಿ ಅವರು ಕಡಿಮೆ ಓಟ್‌ ಪಡೆದರು.
ಎರಡನೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ನಾಲ್ವರು ಹೊರಬಿದ್ದಿದ್ದಾರೆ. ಮೊದಲ ವಾರ ಕಿರಣ್ ಕಡಿಮೆ ಮತ ಪಡೆದು ಎಲಿಮಿನೇಟ್ ಆಗಿದ್ದರು, ಆ ಬಳಿಕ ಗಾಯದ ಕಾರಣದಿಂದ ಲೋಕೇಶ್ ಹೊರನಡೆದರು. ಈ ವಾರ ಅರ್ಜುನ್ ರಮೇಶ್ ಗಾಯದ ಸಮಸ್ಯೆಯಿಂದ ಹೊರ ಹೊರಟರೆ, ಸ್ಫೂರ್ತಿ ನಾಮಿನೇಟ್‌ ಆಗಿ ಹೊರಬಿದ್ದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!