ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ ಬಾಸ್ ಕನ್ನಡ 11ರ ಶೋಗೆ (ಇಂದು (ಸೆ.29) ಸಂಜೆ ಪ್ರಾರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಈಗಾಗಲೇ ದೊಡ್ಮನೆಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಬಿಗ್ ಬಾಸ್ ಶೋ ಪ್ರಸಾರಕ್ಕೂ ಮೊದಲೇ ದೊಡ್ಮನೆಯ ಸ್ಬರ್ಗ ಮತ್ತು ನರಕ ಝಲಕ್ ಅನ್ನು ವಾಹಿನಿ ರಿವೀಲ್ ಮಾಡಿದೆ.
ಕಳೆದ 10 ಸೀಸನ್‌ಗಳಿಂದ ಬಿಗ್ ಬಾಸ್ ಮನೆ ಒಂದರಕ್ಕಿಂತ ಒಂದು ಅದ್ಧೂರಿಯಾಗಿ ತೋರಿಸಲಾಗಿತ್ತು. ಈ ಬಾರಿಯು ಮತ್ತಷ್ಟು ವಿಜೃಂಭಣೆಯಿಂದ ಬಿಗ್ ಬಾಸ್ ಮನೆಯನ್ನು ರೆಡಿ ಮಾಡಲಾಗಿದೆ. ಈ ಬಾರಿ ಸ್ವರ್ಗ ಮತ್ತು ನರಕ ಎಂದು 2 ಕಾನ್ಸೆಸ್ಟ್‌ಗಳು ಒಳಗೊಂಡಿದೆ.
ಈ ಬಾರಿ ಕೂಡ ಹೊಸ ಥೀಮ್‌ನೊಂದಿಗೆ ದೊಡ್ಮನೆಯನ್ನು ವಾಹಿನಿ ಸ್ವರ್ಗ ಮತ್ತು ನರಕದಂತೆಯೇ ಸಿದ್ಧಪಡಿಸಿದ್ದಾರೆ. ಸ್ವರ್ಗದ ಮನೆ ಐಷರಾಮಿಯಾಗಿದ್ರೆ, ಇತ್ತ ನರಕದ ಮನೆ ಭಯಾನಕವಾಗಿದೆ. ಸದ್ಯದ ಕುತೂಹಲ ಏನಪ್ಪಾ ಅಂದರೆ, ಬಂದಿರುವ 17 ಸ್ಪರ್ಧಿಗಳು ಸ್ವರ್ಗಕ್ಕೆ ಯಾರು? ನರಕಕ್ಕೆ ಯಾರು ಎಂದು ಕಾದುನೋಡಬೇಕಿದೆ.
https://x.com/ColorsKannada/status/1840271595002007831
ಇದೆಲ್ಲದರ ನಡುವೆ ಸುದೀಪ್ (Sudeep) ಸನ್‌ಗ್ಲಾಸ್ ಧರಿಸಿ `ಬಿಗ್ ಬಾಸ್’ ವೇದಿಕೆ ಸ್ಟೈಲೀಶ್ ಎಂಟ್ರಿ ಕೊಟ್ಟಿದ್ದಾರೆ. ಸ್ಪರ್ಧಿಗಳ ಡ್ಯಾನ್ಸ್‌ನ ಸಣ್ಣ ಝಲಕ್ ಶೇರ್ ಮಾಡಿದ್ದಾರೆ. ಮುಖ ತೋರಿಸದೇ ಇದ್ದರೂ ಡ್ಯಾನ್ಸ್ ಸಣ್ಣ ತುಣುಕು ಎಲ್ಲರ ಗಮನ ಸೆಳೆಯುತ್ತಿದೆ.
ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ, ಅನುಷಾ ರೈ, ಧರ್ಮ ಕೀರ್ತಿರಾಜ್, ಉಗ್ರಂ ಮಂಜು, ಧನರಾಜ್ ಆಚಾರ್, ಐಶ್ವರ್ಯಾ ಸಿಂದೋಗಿ, ಯಮುನಾ ಶ್ರೀನಿಧಿ, ತ್ರಿವಿಕ್ರಮ್, ಶೀಶಿರ್, ಗೋಲ್ಡ್ ಸುರೇಶ್, ಗೌತಮಿ, ಮಾನಸಾ, ರಂಜಿತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಾಗಿದೆ. ಇಂದು ಸಂಜೆ ಅಧಿಕೃತವಾಗಿ ವಾಹಿನಿ ಮೂಲಕ ಅನಾವರಣ ಆಗಬೇಕಿದೆ.
ಇನ್ನೂ ಬಿಗ್ ಬಾಸ್ ಕಾರ್ಯಕ್ರಮವು ಪ್ರತಿದಿನ ರಾತ್ರಿ 9:30ಕ್ಕೆ ಪ್ರಸಾರವಾಗಲಿದ್ದು, ಈ ಬಾರಿ ವಿವಾದಿತ ಸ್ಪರ್ಧಿಗಳು ಕೂಡ ದೊಡ್ಮನೆಯಲ್ಲಿದ್ದಾರೆ.