BIGG NEWS : ಕ್ರಿಸ್ಮಸ್ ಆಚರಣೆ, ಗಂಗಾಸಾಗರ ಮೇಳಕ್ಕೆ ಯಾವುದೇ ನಿರ್ಬಂಧವಿಲ್ಲ : ಬಂಗಾಳ ಸಿಎಂ ಮಮತಾ ಬ್ಯಾನರ್ಜಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿದೇಶಗಳಲ್ಲಿ ಕೋವಿಡ್ ಕೇಸ್ ಗಳು ಹೆಚ್ಚುತ್ತಿರುವ ಬೆನ್ನಲ್ಲೆ ಕೇಂದ್ರ ಆರೋಗ್ಯ ಸಚಿವಾಲಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯಗಳಿಗೂ ಕೋವಿಡ್ ಕ್ರಮ ಅನುಸರಿಸುವಂತೆ ಸೂಚಿಸಿದೆ. ಆದರೆ ಬಂಗಾಳದಲ್ಲಿ ಮುಂಬರುವ ಕ್ರಿಸ್ಮಸ್ ಆಚರಣೆಗಳು ಮತ್ತು ಗಂಗಾಸಾಗರ ಮೇಳದ ಸಮಯದಲ್ಲಿ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.

ಮಾರ್ಚ್ 2020 ರಲ್ಲಿ ದೇಶವನ್ನು ಕಾಡುತ್ತಿರುವ ಸಾಂಕ್ರಾಮಿಕ ಕೋವಿಡ್ ರಾಜ್ಯದಲ್ಲಿ ಸಂಭವಿಸಿದ್ರೆ ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು. ಇವೆಲ್ಲದರ ಮೇಲೆ ನಿಗಾ ಇಡಲಾಗುತ್ತಿದ್ದು, ಇವೆಲ್ಲವನ್ನೂ ನೋಡಿಕೊಳ್ಳಲು ಸಮಿತಿ ರಚಿಸಿದ್ದೇವೆ ಎಂದು ಹೇಳಿದ್ದಾರೆ.

ಭಾರತದ ವಿವಿಧ ಭಾಗಗಳಿಂದ ಲಕ್ಷಾಂತರ ಯಾತ್ರಾರ್ಥಿಗಳನ್ನು ಆಕರ್ಷಿಸುವ ವಾರ್ಷಿಕ ಗಂಗಾಸಾಗರ ಮೇಳ (ಜಾತ್ರೆ) 2020 ಮತ್ತು 2021 ರಂತೆ ಆರೋಗ್ಯ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಿ ಜನವರಿಯಲ್ಲಿ ನಡೆಯಲಿದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ.

ವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್ ಬಿಎಫ್.7 ರ ದೇಶದಲ್ಲಿ ಪತ್ತೆಯಾದ ವಿಚಾರ ಹಾಗೂ ಕೋವಿಡ್ -19 ಪರಿಸ್ಥಿತಿಯನ್ನು ತಾನು ಮತ್ತು ಬೋಸ್ ಚರ್ಚಿಸಿದ್ದೇವೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!