ಕೇಂದ್ರದಿಂದ ರಾಜ್ಯದ ರೈಲ್ವೆಗೆ ಬಹುದೊಡ್ಡ ಉಡುಗರೆ: ಸಚಿವ ಸಿಸಿ ಪಾಟೀಲ್ ಅಭಿನಂದನೆ

ಹೊಸದಿಗಂತ ವರದಿ, ಗದಗ:

ನೈರುತ್ಯ ರೈಲ್ವೆ ವಲಯಕ್ಕೆ ಪ್ರಸಕ್ತ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರವು 6,900 ಕೋ. ರೂ.ಗಳ ಅನುದಾನವನ್ನು ಘೋಷಿಸಿ ಕರ್ನಾಟಕಕ್ಕೆ ಸಿಂಹಪಾಲು ನೀಡಿರುವುದು ರಾಜ್ಯದ ರೈಲ್ವೆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರವು ಬಹುದೊಡ್ಡ ಉಡುಗೊರೆ ನೀಡಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲರು ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ಸೂಪರ್ ಕೊಡುಗೆ :
ಧಾರವಾಡ-ಕಿತ್ತೂರು-ಬೆಳಗಾವಿ ಹೊಸ ಮಾರ್ಗಕ್ಕೆ 20 ಕೋ.ರೂ, ಗದಗ-ವಾಡಿ ಹೊಸ ಮಾರ್ಗಕ್ಕೆ187 ಕೋ.ರೂ, ಬಾಗಲಕೋಟೆ- ಕುಡಚಿ, ತುಮಕೂರು-ದಾವಣಗೆರೆ, ಶಿವಮೊಗ್ಗ-ರಾಣೆಬೆನ್ನೂರು ಈ ೩ ಹೊಸ ಮಾರ್ಗಗಳಿಗೆ ತಲಾ 50 ಕೋ.ರೂ.ಗಳನ್ನು ಹಂಚಿಕೆ ಮಾಡಿರುವುದು, ಗದಗ-ಹೂಟಗಿ ಡಬ್ಲಿಂಗ್ ಲೈನ್‌ಗಾಗಿ 200 ಕೋ.ರೂ ಹಾಗೂ ಹುಬ್ಬಳ್ಳಿ-ಚಿಕ್ಕಜಾಜೂರು ಡಬ್ಲಿಂಗ್ ಲೈನ್‌ಗಾಗಿ 210 ಕೋ.ರೂ ಅನುದಾನ ಸೇರಿದಂತೆ ಅನೇಕ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಕೇಂದ್ರ ಸರ್ಕಾರವು ಕರ್ನಾಟಕದ ಮೇಲಿನ ತನ್ನ ಮಮತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಸಿ.ಸಿ. ಪಾಟೀಲರು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!