ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಪಲ್ ವಿಶ್ವಾದ್ಯಂತ ತನ್ನ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಬೆನ್ನಲ್ಲೇ 60,000 ಭಾರತೀಯರಿಗೆ ಉದ್ಯೋಗವನ್ನು ನೀಡಲಿದೆ ಎಂಬ ಮಾಹಿತಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು. ಹೊಸೂರು ಬಳಿ ಅತಿದೊಡ್ಡ ಐಫೋನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದ್ದು, ಸುಮಾರು 60000 ಭಾರತೀಯರಿಗೆ ಉದ್ಯೋಗ ಸಿಗಲಿದೆ ಎಂದರು.
6 ಸಾವಿರ ಬುಡಕಟ್ಟು ಮಹಿಳೆಯರಿಗೆ ಐಫೋನ್ ತಯಾರಿಸಲು ತರಬೇತಿ
ರಾಂಚಿ ಮತ್ತು ಹಜಾರಿಬಾಗ್ ಸುತ್ತಮುತ್ತ ವಾಸಿಸುವ 6,000 ಬುಡಕಟ್ಟು ಮಹಿಳೆಯರಿಗೆ ಐಫೋನ್ ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಜಂಜಾಟಿಯಾ ಗೌರವ್ ದಿವಸ್ ಸಮಾರಂಭದಲ್ಲಿ ವೈಷ್ಣವ್ ಹೇಳಿದರು. ಆಪಲ್‌ನ ಐಫೋನ್ ಈಗ ಭಾರತದಲ್ಲಿ ತಯಾರಾಗುತ್ತಿದೆ ಮತ್ತು ದೇಶದ ಅತಿದೊಡ್ಡ ಕಾರ್ಖಾನೆಯನ್ನು ಬೆಂಗಳೂರು ಸಮೀಪದ ಹೊಸೂರಿನಲ್ಲಿ ಸ್ಥಾಪಿಸಲಾಗುತ್ತಿದೆ. ಒಂದು ಕಾರ್ಖಾನೆಯಲ್ಲಿ 60,000 ಜನರು ಕೆಲಸ ಮಾಡುತ್ತಾರೆ ಎಂಬ ವಿಚಾರವನ್ನು ತಿಳಿಸಿದರು.
ಟಾಟಾ ಎಲೆಕ್ಟ್ರಾನಿಕ್ಸ್ ಐಫೋನ್ ಫ್ಯಾಕ್ಟರಿಯನ್ನು ಸ್ಥಾಪಿಸಲು ಒಪ್ಪಂದ
ಪಿಟಿಐ ಸುದ್ದಿ ಸಂಸ್ಥೆ ಪ್ರಕಾರ, ಹೊಸೂರಿನಲ್ಲಿ ಐಫೋನ್ ಕಾರ್ಖಾನೆಯನ್ನು ಸ್ಥಾಪಿಸುವ ಗುತ್ತಿಗೆಯನ್ನು ಆಪಲ್ ಟಾಟಾ ಎಲೆಕ್ಟ್ರಾನಿಕ್ಸ್‌ಗೆ ನೀಡಿದೆ. ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉದ್ಯಮಿಗಳಾದ ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ತಯಾರಿಸಿದ ಐಫೋನ್‌ಗಳನ್ನು ಕಂಪನಿಯು ಪಡೆಯುತ್ತದೆ ಎಂದು ಹೇಳಿದರು.