ಉದ್ಯಾನದಲ್ಲಿ ಪತ್ತೆಯಾಯ್ತು ಜಗತ್ತಿನ ಅತ್ಯಂತ ವಿಷಕಾರಿ ಸಸ್ಯ: ಇದು ಸೈನೈಡ್‌ಗಿಂತ 6,000 ಪಟ್ಟು ಪ್ರಬಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಇಂಗ್ಲೆಂಡ್‌ ನ ಉತ್ತರ ವೇಲ್ಸ್‌ ಭಾಗದ ಮಹಿಳೆಯೊಬ್ಬರು ಪಾರ್ಕ್​​ನಲ್ಲಿ ಅಡ್ಡಾಡುತ್ತಿರುವಾಗ ಅಲ್ಲಿ ಅತ್ಯಂತ ವಿಷಕಾರಿ ಸಸ್ಯವಾದ ರಿಕಿನಸ್ ಕಮ್ಯುನಿಸ್  ಸಸ್ಯವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಈ ಪೊದೆಸಸ್ಯವನ್ನು ಕ್ಯಾಸ್ಟರ್ ಆಯಿಲ್ ಪ್ಲಾಂಟ್ ಎಂದು ಸಹ ಕರೆಯಲಾಗುತ್ತದೆ, ಇದು ಸೈನೈಡ್‌ಗಿಂತ 6,000 ಪಟ್ಟು ಹೆಚ್ಚು ಮಾರಣಾಂತಿಕ ವಿಷಕಾರಿ ಅಂಶಗಳನ್ನು ಹೊಂದಿರುತ್ತದೆ.
ಮಹಿಳೆಯೊಬ್ಬರು ಹೂದೋಟದಲ್ಲಿನ ಹೂವಿನ ನೋಟಗಳನ್ನು ಇಷ್ಟಪಟ್ಟು ನೋಡುತ್ತಾ ಸಾಗುತ್ತಿದ್ದರು. ಇದೇ ವೇಳೆ ಅವರಿಗೆ  ಅವರಿಗೆ ಹೂವುಗಳು ಹಾಗೂ ಪೊದೆಗಳ ನಡುವೆ ಹುದುಗಿರುವ ಸುಂದರ ಪುಷ್ಪಗಳು ಕಾಣಿಸಿವೆ. ಅದನ್ನು ಆಕೆ ಪತಿಗೆ ತೋರಿಸಿ ಮಾಹಿತಿ ಕೇಳಿದ್ದಾಳೆ. ಆಕೆಯ ಪತಿ ಆ ಬಗ್ಗೆ ಹುಡುಕಾಟ ನಡೆಸಿದಾಗ ಆ ಸಸ್ಯವು ವಿಶ್ವದ ಅತ್ಯಂತ ಮಾರಣಾಂತಿಕ ವಿಷಕಾರಿ ಸಸ್ಯವಾಗಿರುವುದು ಪತ್ತೆಯಾಗಿದೆ.
ಸಸ್ಯದಲ್ಲಿರುವ ರಿಸಿನ್ ಎಂಬ ರಾಸಾಯನಿಕವು ಅತ್ಯಂತ ಅಪಾಯಕಾರಿಯಾಗಿದೆ. ಈ ಸಸ್ಯವನ್ನು ಮುಟ್ಟುವಾಗ ಕೈಗವಸುಗಳನ್ನು ಬಳಸಬೇಕು. ಇದರ ಬೀಜಗಳು ಅಥವಾ ಪುಷ್ಪವನ್ನು ಸೇವಿಸಿದರೆ ತಕ್ಷಣ ಸಾವು ಖಚಿತ.
ಸಂಶೋಧನೆಗಳ ಪ್ರಕಾರ ಮನುಷ್ಯನನ್ನು ಕೊಲ್ಲಲು ತೆಗೆದುಕೊಳ್ಳುವ ವಿಷದ ಪ್ರಮಾಣವನ್ನು ಆಧರಿಸಿ ವಿಷಕಾರಿ ಸಸ್ಯಗಳನ್ನು ನಿರ್ಧರಿಸಲಾಗುತ್ತದೆ. ಅಂದಾಜಿನ ಪ್ರಕಾರ 72 ಕೆಜಿ ತೂಕದ ವ್ಯಕ್ತಿಯನ್ನು ಕೊಲ್ಲಲು 70 ಮೈಕ್ರೋಗ್ರಾಂಗಳಷ್ಟು ವಿಷ ಸಾಕಾಗುತ್ತದೆ. ಅನೇಕ ಅಲಂಕಾರಿಕ ಸಸ್ಯಗಳಂತೆ ನಾವು ಈ ಸಸ್ಯವನ್ನು ಉದ್ಯಾನದಲ್ಲಿ ಬೆಳೆಸಿದ್ದೇವೆ. ಇದರ ಬೀಜಪ್ರಸರಣೆಗೂ ಮೊದಲು ನಾವು ಸಸ್ಯಗಳನ್ನು ತೆಗೆದುಹಾಕುತ್ತೇವೆ ಎಂದು ಉದ್ಯಾನ ಅಧಿಕಶರಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!