ಮಹಿಳೆಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ವರದಕ್ಷಿಣೆ ಹಣದೊಂದಿಗೆ ಪರಾರಿಯಾಗುತ್ತಿದ್ದ ಭೂಪ ಅರೆಸ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿ ಮಹಿಳೆಯರನ್ನು ಬಲೆಗೆ ಬೀಳಿಸಿಕೊಂಡು ಅವರಿಂದ ದೊಡ್ಡ ಪ್ರಮಾಣದ ವರದಕ್ಷಿಣೆ ಪಡೆದು ವಂಚಿಸುತ್ತಿದ್ದ ಭೂಪನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು 38 ವರ್ಷದ ಸಂಜಯ್ ಸಿಂಗ್ ಅಲಿಯಾಸ್ ಹರಿಓಂ ದುಬೆ ಎಂದು ಗುರುತಿಸಲಾಗಿದ್ದು, ಸಂಜಯ್ ಸಿಂಗ್ ಮ್ಯಾಟ್ರಿಮೋನಿಯಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ತಾನು ಎಂಜಿನಿಯರ್ ಎಂದು ಹೇಳಿಕೊಂಡಿದ್ದ. ವರದಕ್ಷಿಣೆ ಪಡೆದು ಮಹಿಳೆಯರನ್ನು ಮದುವೆಯಾಗುತ್ತಿದ್ದ ಆತ ಆ ಬಳಿಕ ವಧುದಕ್ಷಿಣೆಯಾಗಿ ಕಾರು, ನಗದು ಹಣ, ಆಭರಣಗಳನ್ನು ಪಡೆದುಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದ. ಹಲವರಿಗೆ ಹೀಗೆ ವಂಚಿಸಿ ಅದಾದ ಬಳಿಕ ತಲೆ ಮರೆಸಿಕೊಂಡಿದ್ದ. ಇದೀಗ ಆರೋಪಿಯನ್ನು ಲಕ್ನೋ ಪೊಲೀಸರು ಆಶಿಯಾನಾ ಅಂಡರ್‌ಪಾಸ್‌ ಬಳಿ ಬಂಧಿಸಿದ್ದಾರೆ.
ಪ್ರತಾಪಗಢ ನಿವಾಸಿ ಮಹಿಳೆಯೊಬ್ಬರು ಆರೋಪಿ ವಿರುದ್ಧ ದೂರು ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದಾಗ ವಿಷಯ ಬೆಳಕಿಗೆ ಬಂದಿತ್ತು. ಮ್ಯಾಟ್ರಿಮೋನಿಯಲ್ ಸೈಟ್ ಮೂಲಕ ಸಂಜಯ್ ಅವರನ್ನು ಭೇಟಿಯಾಗಿ ಮದುವೆಯಾಗಿದ್ದೆ ಎಂದು ಮಹಿಳೆ ಹೇಳಿದ್ದರು. ಆದರೆ, ಮದುವೆಯಾದ ಕೂಡಲೇ ಸಂಜಯ್ ವರದಕ್ಷಿಣೆಗಾಗಿ ಕಿರುಕುಳ ನೀಡಲಾರಂಭಿಸಿದ್ದ. ಸಂಜಯ್ ಅವರು ನನ್ನನ್ನು ಬಿಹಾರದ ಅವರ ಸ್ವಗ್ರಾಮಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ. ನಾನು ಅದರ ತಯಾರಿಯಲ್ಲಿ ನಿರತರಾಗಿದ್ದಾಗ ಆತ ವರದಕ್ಷಿಣೆ ಹಣ (1 ಲಕ್ಷ ರೂ, ನಗದು, ಆಭರಣ ಮತ್ತು ಕಾರು) ನೊಂದಿಗೆ ಪರಾರಿಯಾಗಿದ್ದಾರೆ ಎಂದು ಮಹಿಳೆ ದೂರಿದ್ದರು.
ಇದೇ ವೇಳೆ ಸಂಜಯ್ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜಯ್ ಶಾದಿ ಡಾಟ್ ಕಾಮ್ ನಲ್ಲಿ ನಕಲಿ ಐಡಿ ಸೃಷ್ಟಿಸಿ ಮಹಿಳೆಯರನ್ನು ಮದುವೆಯಾಗುತ್ತಿದ್ದ ಮತ್ತು ವರದಕ್ಷಿಣೆಯಾಗಿ ಪಡೆದ ಹಣವನ್ನು ವಂಚಿಸುತ್ತಿದ್ದ ಎಂದು ಡಿಸಿಪಿ ಪೂರ್ವ ಪ್ರಾಚಿ ಸಿಂಗ್ ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!