ಕಿಮ್ ಮಗಳ ಫೋಟೋ ಬಗ್ಗೆ ಚರ್ಚೆ: ಇದು ಅವರ ಎರಡನೇ ಮಗಳು ಎಂದ ದಕ್ಷಿಣ ಕೊರಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಇತ್ತೀಚೆಗೆ ಖಂಡಾಂತರ ಕ್ಷಿಪಣಿ ಉಡಾವಣೆ ವೀಕ್ಷಿಸಲು ತಮ್ಮ ಮಗಳೊಂದಿಗೆ ಬಂದಿದ್ದರು. ಅವರ ಮಗಳ ಹೆಸರು ಕಿಮ್ ಚು-ಏ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿದ್ದವು. ಕಿಮ್ ತನ್ನ ಮಗಳನ್ನು ಅಲ್ಲಿಗೆ ಏಕೆ ಕರೆದೊಯ್ದರು? ಕಿಮ್‌ಗೆ ಎಷ್ಟು ಮಕ್ಕಳಿದ್ದಾರೆ? ಜಗತ್ತಿಗೆ ತೋರಿಸಿದ ಹುಡುಗಿ ಕಿಮ್ ಮಗಳೇ? ಮುಂತಾದ ಪ್ರಶ್ನೆಗಳಿಗೆ ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸಂಸ್ಥೆ ವಿವರಗಳನ್ನು ನೀಡಿದೆ.

ಇತ್ತೀಚೆಗೆ ಬಿಳಿ ಕೋಟ್ ಮತ್ತು ಕೆಂಪು ಬೂಟುಗಳನ್ನು ಧರಿಸಿ ಕಾಣಿಸಿಕೊಂಡಿರುವ ಹುಡುಗಿ ಕಿಮ್ ಜಾಂಗ್ ಉನ್ ಅವರ ಎರಡನೇ ಮಗಳು ಮತ್ತು ಆಕೆಗೆ 10 ವರ್ಷ ಎಂದು ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸೇವೆ ಹೇಳಿದೆ. ಆ ಸಮಯದಲ್ಲಿ ಕಿಮ್ ಜೊತೆಗೆ ಅವರ ಪತ್ನಿ ರಿ ಸೋಲ್ ಯೂ ಕೂಡ ಕಾಣಿಸಿಕೊಂಡಿದ್ದರು. ಕಿಮ್ ಅವರ ಮಗಳಿಗೆ ಜು ಯಿ ಎಂದು ಹೆಸರಿಡಲಾಗಿದೆ ಎಂದು ದಕ್ಷಿಣ ಕೊರಿಯಾದ ರಾಷ್ಟ್ರೀಯ ಗುಪ್ತಚರ ಸಂಸ್ಥೆಯ ವಕ್ತಾರ ಯೂ ಸಾಂಗ್-ಬಮ್ ಹೇಳಿದರು.

ಕಿಮ್‌ಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ. ಈ ಮೂವರಲ್ಲಿ ಎರಡನೇ ಹುಡುಗಿಯನ್ನು ಕಿಮ್ ಜಗತ್ತಿಗೆ ಪರಿಚಯಿಸಿದರು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!