ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಪ್ರಖ್ಯಾತ ಬಿಹು ಉತ್ಸವದಲ್ಲಿ ಬರೋಬ್ಬರಿ 11 ಸಾವಿರಕ್ಕೂ ಅಧಿಕ ಕಲಾವಿದರು ಏಕಕಾಲದಲ್ಲಿ ನೃತ್ಯ ಮಾಡುವ ಮೂಲಕ ವಿಶ್ವದ ಅತೀದೊಡ್ಡ ಬಿಹು ಪ್ರದರ್ಶನದ ಗಿನ್ನೆಸ್ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ.
ಇದು ವಿಶ್ವದ ಅತೀದೊಡ್ಡ ಜಾನಪದ ನೃತ್ಯ ಕಾರ್ಯಕ್ರಮ ಎನ್ನುವ ಗಿನ್ನೆಸ್ ದಾಖಲೆಯನ್ನು ನಿರ್ಮಾಣ ಮಾಡಲಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
#WATCH | Assam: PM Narendra Modi along with CM Himanta Biswa Sarma attends Mega Bihu Programme in Guwahati. pic.twitter.com/eZiigUE9tb
— ANI (@ANI) April 14, 2023
ಅಸ್ಸಾಂನ ಪ್ರಖ್ಯಾತ ಬಿಹು ಉತ್ಸವದಲ್ಲಿ ಭಾಗಿಯಾಗುವ ಸಲುವಾಗಿಯೇ ಪ್ರಧಾನಿ ಅಸ್ಸಾಂಗೆ ಆಗಮಿಸಿದರು. ಈ ವೇಳೆ 14,300 ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಹಾಗೂ ಚಾಲನೆ ನೀಡಿದರು. ಮೊದಲಿಗೆ ಈಶಾನ್ಯ ಭಾಗದ ಮೊದಲ ಏಮ್ಸ್‌ಅನ್ನು ಮೋದಿ ಅನಾವರಣ ಮಾಡಿದರು. ಅದರೊಂದಿಗೆ ನಲ್ಬರಿ, ನಾಗೌನ್ ಹಾಗೂ ಕೊಕ್ರಾಜರ್‌ನಲ್ಲಿ ಹೊಸ ವೈದ್ಯಕೀಯ ಕಾಲೇಜುಗಳಿಗೆ ವರ್ಚುವಲ್ ಆಗಿ ಅನಾವರಣ ಮಾಡಿದರು.ಬಳಿಕ ಸಂಜೆ 6 ಗಂಟೆಗೆ ಸುರಸಜೈ ಸ್ಟೇಡಿಯಂ ತಲುಪಿದ ಪ್ರಧಾನಿ, ಅಲ್ಲಿ 31 ಜಿಲ್ಲೆಗಳ 11 ಸಾವಿರಕ್ಕೂ ಹೆಚ್ಚು ಕಲಾವಿದರು ಒಟ್ಟಾಗಿ ಮಾಡಿದ ಬಿಹು ನೃತ್ಯವನ್ನು ವೀಕ್ಷಿಸಿದರು.