ಹೊಸದಿಗಂತ ವರದಿ, ವಿಜಯಪುರ:
ಬೈಕ್ ಹಾಗೂ ಕ್ಯಾಂಟರ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಸಿಂದಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ನಡೆದಿದೆ.
ಮೃತಪಟ್ಟವನನ್ನು ಆಲಮೇಲ ತಾಲೂಕಿನ ಅಲ್ಲೋಳ್ಳಿ ಗ್ರಾಮದ ಶರಣಗೌಡ ಬಿರಾದಾರ (40) ಎಂದು ಗುರುತಿಸಲಾಗಿದೆ.
ಶರಣಗೌಡ ಬಿರಾದಾರ ಈತ ಕಕ್ಕಳಮೇಲಿ ಗ್ರಾಮ ಪಂಚಾಯಿತಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತಿದ್ದರು. ಕಚೇರಿಯಿಂದ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಪಿಎಸ್ಐ ಆರಿಫ್ ಮುಷಾಪುರಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.