ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನಲ್ಲಿ ಕಟ್ಟಡದ ಪಾರ್ಕಿಂಗ್ ಲಾಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 16 ದುಬಾರಿ ಕಾರ್‌ಗಳು ಬೆಂಕಿಗೆ ಆಹುತಿಯಾಗಿವೆ.
ದಾದರ್ ಪ್ರದೇಶದ ಹರಿಶ್ಚಂದ್ರ ಯವಾಲೆ ಮಾರ್ಗದ ಕೊಹಿನೂರ್ ಬ್ಯುಲ್ಡಿಂಗ್‌ನ ಪಾರ್ಕಿಂಗ್‌ನಲ್ಲಿ ಬೆಂಕಿ ಹೊತ್ತಿದ್ದು, ಕಾರ್‌ಗಳು ಸುಟ್ಟು ಭಸ್ಮವಾಗಿವೆ.
ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ವಾಹನಗಳಿಗೆ ಬೆಂಕಿ ತಗುಲಿದೆ, ಬೆಂಕಿ ಹತ್ತಲು ಕಾರಣ ಏನೆಂದು ತಿಳಿದುಬಂದಿಲ್ಲ, ಯಾವುದೇ ಸಾವು ನೋವಿನ ಬಗ್ಗೆಯೂ ವರದಿಯಾಗಿಲ್ಲ.