Friday, December 9, 2022

Latest Posts

ಕುಶಾಲನಗರದಲ್ಲಿ ಬೈಕ್- ಲಾರಿ ಡಿಕ್ಕಿ: ಸವಾರ ಸಾವು

ಹೊಸದಿಗಂತ ವರದಿ, ಕುಶಾಲನಗರ:
ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮೃತರನ್ನು ಪಿರಿಯಾಪಟ್ಟಣ ತಾಲೂಕಿನ ಹೊನ್ನಾಪುರ ಗ್ರಾಮದ ನಿವಾಸಿ ಧನಂಜಯ (28) ಎಂದು ಗುರುತಿಸಲಾಗಿದೆ.
ಹೆಬ್ಬಾಲೆಯಿಂದ ಕೂಡಿಗೆ ಕಡೆಗರ ಬರುತ್ತಿದ್ದ ಬೈಕ್’ಗೆ (ಕೆಎ45 ಎಸ್ 8295) ಕೂಡಿಗೆಯಿಂದ ಹಾಸನಕ್ಕೆ ಹೋಗುತ್ತಿದ್ದ ಕೆಎ 19 ಒ 8644ರ ಲಾರಿಯ ಹಿಂದಿನ ಕಬ್ಬಿಣದ ರಾಡ್ ತಗುಲಿದ ಪರಿಣಾಮ ಬೈಕ್ ಸವಾರ ರಸ್ತೆ ಬದಿಯ ಎಸೆಯಲ್ಪಟ್ಟು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.
ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!