ಬೈಕ್ ಕಳ್ಳತನ: ಆರೋಪಿಗಳ ಬಂಧನ, 15 ಬೈಕ್ ವಶ

ದಿಗಂತ ವರದಿ, ಬಳ್ಳಾರಿ:

ನಗರದ ನಾನಾ ಕಡೆ ಬೈಕ್ ಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಗಳು ಹಾಗೂ 15 ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಳ್ಳಾರಿ ‌ನಗರ ಉಒ ವಿಭಾಗದ ಪತ್ತೆ ದಳ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಸಿ, ಅವರಿಂದ ವಿವಿಧ ಕಂಪನಿಯ ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಎಸ್ಪಿ ಸೈದಲು ಅಡಾವತ್, ಎಎಸ್ ಪಿ ಲಾವಣ್ಯ, ಅವರ ಮಾರ್ಗದರ್ಶನದಲ್ಲಿ ನಗರ ಉಪ ವಿಭಾಗ ಡಿಎಸ್ಪಿ ಎಚ್.ಬಿ.ರಮೇಶ್ ಕುಮಾರ್ ಅವರ ತಂಡದ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಆರೊಪಿಗಳಾದ ದಾದಾ‌ ಖಲಾಂದರ್, ಮೊಹಮ್ಮದ್ ಸಮೀರ್, ಷಾಷಾವಲಿ, ಎಂ.ಡಿ.ಜುಮೇರ್ ಅವರನ್ನು ಪೊಲೀಸ್ ರು ಬಂಧಿಸಿದ್ದು, ಅವರಿಂದ 15 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಬಳ್ಳಾರಿ‌ ನಗರ ಉಪ ವಿಭಾಗದ ಡಿಎಸ್ಪಿ ಎಚ್.ಬಿ.ರಮೇಶ್ ಕುಮಾರ್, ಕೌಲ್ ಬಜಾರ್ ಠಾಣೆ ಪಿಐ ಸುಭಾಷ್ ಚಂದ್ರ ಟಿ, ಪಿಎಸ್ಐ ಎಚ್.ಬಿ.ವಿಜಯಲಕ್ಷ್ಮಿ, ಪ್ರೊಬೇಷನರಿ ಪಿಎಸ್ಐ ಮಣಿಕಂಠ , ಎಎಸ್ಐ ಗಳಾದ ಲಾರೆನ್ಸ್, ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ನಾಗರಾಜ್, ಅನ್ವರ್ ಭಾಷಾ, ಕೆ.ಸಿದ್ದಯ್ಯ, ಸರ್ಧಾರ್, ಕೆ.ಎನ್.ಸೋಮಪ್ಪ, ರಾಮ್ ದಾಸ್, ರಮೇಶ್ ಸಿ., ದಿವಾಕರ್, ರವಿ, ಮೋಹನ್ ಬಾಬು, ವಂಶಿಕೃಷ್ಣ, ರಾಮಲಿಂಗಪ್ಪ, ಮಾರುತಿ, ಸಿದ್ದೇಶ್, ಎಂ.ರಾಜು ಸೇರಿದಂತೆ ಇತರರಿದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!