ಶಿವಮೊಗ್ಗದಲ್ಲಿ ಬೈಕ್ ವ್ಹೀಲಿಂಗ್ ಮಾಡಿದ ಯುವಕ: 11,500 ರೂ. ದಂಡ ವಿಧಿಸಿದ ನ್ಯಾಯಾಲಯ

ಹೊಸದಿಗಂತ ವರದಿ,ಶಿವಮೊಗ್ಗ:

ಬೈಕ್ ವ್ಹೀಲಿಂಗ್ ಮಾಡಿದ್ದ ಯುವಕನಿಗೆ ನ್ಯಾಯಾಲಯ ಬರೋಬ್ಬರಿ 11,500 ರೂ.ಗಳ ದಂಡ ವಿಧಿಸಿದೆ.

ತಾಲೂಕಿನ ಪುರದಾಳು ಸಮೀಪ ರಿಂಗ್ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಯುವಕನೋರ್ವ ಬೈಕ್ ವ್ಹೀಲಿಂಗ್ ಮಾಡಿದ್ದ. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಇದರ ವಿಡಿಯೋ ಪಶ್ಚಿಮ ಸಂಚಾರಿ ಠಾಣೆ ಪೊಲೀಸರಿಗೆ ಕೂಡ ಲಭ್ಯವಾಗಿತ್ತು.

ಪಶ್ಚಿಮ ಸಂಚಾರಿ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸಂದೀಪ್ ಬೈಕ್ ಮತ್ತು ಚಾಲಕನನ್ನು ಪತ್ತೆ ಮಾಡಿದ್ದರು. ಆತ ಕಾಮಾಕ್ಷಿ ಬೀದಿಯ ಯುವಕ ಎಂಬುದು ಕಂಡುಬಂದಿತ್ತು. ಬಳಿಕ ಪಿಎಸ್‌ಐ ತಿರುಮಲೇಶ್ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ 4ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ 11,500 ರೂ. ದಂಡ ವಿಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!