Saturday, April 1, 2023

Latest Posts

ಲಟ್ಟಣಿಗೆ ಹಿಡಿದು ರೋಟಿ ಮಾಡಿದ ಬಿಲ್ ಗೇಟ್ಸ್: ಪ್ರಧಾನಿ ಮೋದಿ ನೀಡಿದ್ರು ವಿಶೇಷ ಸಲಹೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೈಕ್ರೋಸಾಫ್ಟ್​ ಸಹ ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಲಟ್ಟಣಿಗೆ ಹಿಡಿದು ರೋಟಿ (Roti) ಮಾಡಿದ ವಿಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಇದರ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಸಹ ಬಿಲ್ ಗೇಟ್ಸ್ ರೋಟಿ ವಿಡಿಯೊಗೆ ಮನಸೋತಿದ್ದು, ‘ಸೂಪರ್’ ಎಂದು ಕಮೆಂಟ್ ಮಾಡಿದ್ದಾರೆ. ಇದರ ಜೊತೆಗೆ ಮೋದಿ , ‘ಭಾರತದಲ್ಲಿ ಸಿರಿಧಾನ್ಯ ಇತ್ತೀಚಿನ ಟ್ರೆಂಡ್ ಆಗಿದೆ. ಸಿರಿಧಾನ್ಯಗಳಿಂದ ಅನೇಕ ತಿಂಡಿಗಳನ್ನು ತಯಾರಿಸುತ್ತಾರೆ. ನೀವು ಅದನ್ನೂ ಪ್ರಯತ್ನಿಸಬಹುದು’ ಎಂದು ಸಲಹೆ ನೀಡಿದ್ದಾರೆ.

ಬಿಲ್ ಗೇಟ್ಸ್ ಅಮೆರಿಕದ ಖ್ಯಾತ ಬಾಣಸಿಗ ಈಟಾನ್ ಬರ್ನಾಥ್ ಜತೆ ರೋಟಿ ತಯಾರಿಸುತ್ತಿರುವ ವಿಡಿಯೋವನ್ನು ಶುಕ್ರವಾರ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.

‘ನಾವಿಬ್ಬರೂ ಜತೆಯಾಗಿ ಭಾರತದ ರೋಟಿ ತಯಾರಿಸಿದೆವು. ಈಟಾನ್ ಹಿಂದೊಮ್ಮೆ ಭಾರತದ ಬಿಹಾರಕ್ಕೆ ಪ್ರವಾಸ ತೆರಳಿದ್ದಾಗ ಗೋಧಿ ಬೆಳೆಯುವ ರೈತರನ್ನು ಬೇಟಿಯಾಗಿದ್ದರು. ಹೊಸ ಇಳುವರಿ ತಂತ್ರಜ್ಞಾನಗಳ ಸಹಾಯದಿಂದ ಅವರ ಇಳುವರಿಯನ್ನು ಹೆಚ್ಚಿಸಲಾಗಿದೆ. ಈಟಾನ್ ಅವರು ಅತ್ಯಂತ ಚೆನ್ನಾಗಿ ರೋಟಿ ತಯಾರಿಸುವುದರಲ್ಲಿ ಪ್ರಸಿದ್ಧರಾಗಿರುವ, ದೀದಿ ಕೀ ರಸೋಯಿ ಸಮುದಾಯ ಕ್ಯಾಂಟೀನ್​ಗಳನ್ನು ನಡೆಸುತ್ತಿರುವ ಮಹಿಳೆಯರನ್ನೂ ಭೇಟಿಯಾಗಿದ್ದರು’ ಎಂದು ವಿಡಿಯೋದ ಜತೆಗೆ ಬಿಲ್​ಗೇಟ್ಸ್ ಬರೆದುಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!