ಬಿಲ್‌ಗೇಟ್ಸ್‌ಗೆ ಕೊರೊನಾ ಪಾಸಿಟಿವ್‌, ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್‌ಗೆ ಕರೋನಾ ಪಾಸಿಟಿವ್ ದೃಢಪಟ್ಟಿದೆ. ನಾನು ಸೌಮ್ಯವಾದ ಕೊರೊನಾ ರೋಗಲಕ್ಷಣಗಳನ್ನು ಹೊಂದಿದ್ದೇನೆ ಎಂದು ಬಿಲ್‌ಗೇಟ್ಸ್‌ ಟ್ವೀಟ್‌ ಮಾಡಿದ್ದಾರೆ. ಕರೋನಾದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಹೋಂ ಐಸೋಲೇಷನ್‌ನಲ್ಲಿ ಇರುತ್ತೇನೆ. ಇಂತಹ ಪರಿಸ್ಥಿತಿಯಲ್ಲಿ ಲಸಿಕೆ, ಬೂಸ್ಟರ್ ಡೋಸ್ ಮತ್ತು ಕೋವಿಡ್ ಪರೀಕ್ಷೆಗಳನ್ನು ಪಡೆಯುವ ಸಾಮರ್ಥ್ಯದ ಜೊತೆಗೆ ಉತ್ತಮ ವೈದ್ಯರಿಂದ ನನಗೆ ಚಿಕಿತ್ಸೆ ದೊರೆಯುತ್ತಿರುವುದು ನನ್ನ ಪಾಲಿನ ಅದೃಷ್ಟ ಎಂದಿದ್ದಾರೆ.

ಸಿಯಾಟಲ್ ಮೂಲದ ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್ ವಿಶ್ವದ ಅತ್ಯಂತ ಶಕ್ತಿಶಾಲಿ ಖಾಸಗಿ ಸಂಸ್ಥೆಯಾಗಿದ್ದು, ಸುಮಾರು $ 65 ಬಿಲಿಯನ್ ಮೌಲ್ಯದ್ದಾಗಿದೆ. ಕರೋನಾ ನಿರ್ಮೂಲನೆ ಮಾಡಲು ಬಿಲ್ ಗೇಟ್ಸ್ ಶ್ರಮಿಸಿದ್ದಾರೆ, ವಿಶೇಷವಾಗಿ ಬಡ ದೇಶಗಳಿಗೆ ಲಸಿಕೆ ಮತ್ತು ಔಷಧಿ ರವಾನೆಗೆ ಸಹಕರಿಸಿದ್ದಾರೆ. ಅಕ್ಟೋಬರ್‌ನಲ್ಲಿ ಗೇಟ್ಸ್ ಫೌಂಡೇಶನ್ ಕಡಿಮೆ-ಆದಾಯದ ದೇಶಗಳಿಗೆ ಡ್ರಗ್‌ಮೇಕರ್ ಮೆರ್ಕ್ ಆಂಟಿವೈರಲ್ COVID-19 ಜೆನೆರಿಕ್ ಉತ್ಪಾದನೆ ಹೆಚ್ಚಿಸಲು $ 120 ಮಿಲಿಯನ್ ಖರ್ಚು ಮಾಡುವುದಾಗಿ ಘೋಷಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!