ಮುಂಗಾರಿನ ಬೆನ್ನಲ್ಲೇ ಕರಾವಳಿಯಲ್ಲಿ ‘ಬಿಪರ್ಜಾಯ್’ ಅಬ್ಬರ: ರೆಡ್ ಅಲರ್ಟ್ ಘೋಷಣೆ

ಹೊಸದಿಂಗತ ಡಿಜಿಟಲ್‌ ಡೆಸ್ಕ್:‌ 

ಕರಾವಳಿ ಕರ್ನಾಟಕದಲ್ಲಿ ಒಂದೆಡೆ ಮುಂಗಾರು ಪ್ರವೇಶ ಪಡೆದಿದ್ದು, ಉತ್ತಮ ಮಳೆಯಾಗುತ್ತಿದೆ. ಇದರ ನಡುವೆ ಹವಾಮಾನ ಇಲಾಖೆ ಬಿಪರ್ಜಾಯ್ ಚಂಡಮಾರುತದ ಎಚ್ಚರಿಕೆ ನೀಡಿದ್ದು, ಕರ್ನಾಟಕದ ಕರಾವಳಿ ಭಾಗದಲ್ಲಿ ಸಮುದ್ರಕ್ಕೆ ಇಳಿಯದಂತೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಬಿಪರ್ಜಾಯ್ ಚಂಡಮಾರುತದ ಪ್ರಭಾವ ಹೆಚ್ಚುತ್ತಿದ್ದು, ಮಾಜಾಳಿಯಿಂದ ಮಂಗಳೂರಿನವರೆಗೆ ಸಮುದ್ರ ಗಳಲ್ಲಿ ಅಲೆಗಳ ಅಬ್ಬರ ಜೋರು ಇರಲಿದ್ದು,ಗಾಳಿ ವೇಗವೂ ಅಧಿಕವಾಗಲಿದೆ. ಹೀಗಾಗಿ ವಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಮುನ್ಸೂಚನೆ ನೀಡಿದೆ. ಜೂ. 11 ರ 5. 30 ರಿಂದ ಜೂ. 13 ಮಂಗಳವಾರ ರಾತ್ರಿ 11. 30 ರ ಸಮಯದಲ್ಲಿ 3.5-4.1 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳ ( High waves ) ಕಾಣಲಿದ್ದು, ಮೀನುಗಾರರು ಮುನ್ನೆಚ್ಚರಿಕೆ ಕ್ರಮವಾಗಿ ಸಮುದ್ರಕ್ಕೆ ಇಳಿಯದಂತೆ ಮುನ್ಸೂಚನೆ ನೀಡಿದೆ.

https://twitter.com/SEOC_Karnataka/status/1667895784988372992?cxt=HHwWgMDTqaWYx6UuAAAA

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!