Friday, March 31, 2023

Latest Posts

ಆದಿಲ್ ನಗ್ನ ಫೋಟೋ-ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ಮಾರಾಟ ಮಾಡಿದ್ದಾನೆ: ರಾಖಿ ಸಾವಂತ್ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಾಲಿವುಡ್‌ ಅಂಗಳದಲ್ಲಿ ಸೌಂಡ್ ಮಾಡುತ್ತಿರುವುದು ರಾಖಿ ಸಾವಂತ್ ಮತ್ತು ಆದಿಲ್ ಖಾನ್ ಮದುವೆ ವಿಚಾರ ಮುಂಬೈ ಪೊಲೀಸ್ ಠಾಣೆಯ ಮೆಟ್ಟಿಲಲ್ಲಿದ್ದು, ಆದಿಲ್ ವಿರುದ್ಧ ರಸ್ತೆಯಲ್ಲಿ ನಿಂತುಕೊಂಡು ರಾಖಿ ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ.
ಇದೀಗ ಕೋರ್ಟ್‌ ವಿಚಾರಣೆಗೆಂದು ಪೊಲೀಸರು ಆದಿಲ್‌ನ ಕರೆದುಕೊಂಡು ಹೋಗುವಾಗ ರಾಖಿ ಮೆಡಿಕಲ್ ಟೆಸ್ಟ್‌ ಮಾಡಿಸಿಕೊಂಡಿದ್ದಾರೆ. ಜೊತೆಗೆ ಆದಿಲ್ ಮಾಡಿರುವ ಮೋಸದ ಬಗ್ಗೆ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ.
ಆದಿಲ್ ಖಾನ್‌ ನನ್ನ ನಗ್ನ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ಮಾರಾಟ ಮಾಡಿದ್ದಾನೆ. ಸೈಬರ್ ಕ್ರೈಮ್ ಡಿಪಾರ್ಟ್‌ಮೆಂಟ್‌ ಈ ಕೇಸ್‌ನ ನಡೆಸುತ್ತಿದೆ. ಆದಿಲ್ ನನಗೆ ದೊಡ್ಡ ಮಟ್ಟದಲ್ಲಿ ಮೋಸ ಮಾಡಿರುವ ಕಾರಣ ಆತನಿಗೆ ಬೇಲ್ ಸಿಗಬಾರದು. ಹೀಗಾಗಿ ವೈಯಕ್ತಿಕವಾಗಿ ಪ್ರತಿಯೊಂದು ವಿಚಾರಣೆಯಲೂ ಭಾಗಿಯಾಗುತ್ತಿರುವೆ. ಮೆಡಿಕಲ್ ಟೆಸ್ಟ್‌ ಮಾಡಿಸಿಕೊಂಡು ಸಂಪೂರ್ಣ ರಿಪೋರ್ಟ್‌ ಸಲ್ಲಿಸಿರುವೆ. ಆದಿಲ್ ನನಗೆ ತುಂಬಾ ಟಾರ್ಚರ್‌ ಕೊಟ್ಟಿದ್ದಾನೆ ಅಲ್ಲದೆ ನನ್ನ ಮೊಬೈಲ್‌ನಿಂದ ಓಟಿಪಿ ಪಡೆದುಕೊಂಡು ಹಣ ಹೊಡೆದಿದ್ದಾನೆ’ ಎಂದು ರಾಖಿ ಸಾವಂತ್ ಹೇಳಿದ್ದಾರೆ.
ಮನೆಯಲ್ಲಿ ಬೆಳಗ್ಗೆ ಸುಮ್ಮನಿ ಕುಳಿತಿರುವಾಗ ಆದಿಲ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣವೇ ನಾನು ಪೊಲೀಸ್‌ಗೆ ಕರೆ ಮಾಡಿರುವೆ. ಆಗಾಗ ಮನೆಗೆ ಭೇಟಿ ನೀಡಿ ಜೀವ ಬೆದರಿಕೆ ಹಾಕುತ್ತಿದ್ದ. ನನ್ನ ಬಗ್ಗೆ ಮಾಧ್ಯಮಗಳಲ್ಲಿ ತಪ್ಪಾಗಿ ಹೇಳಿದ್ದರೆ ನಿಮ್ಮ ಕುಟುಂಬ ನಾಶ ಮಾಡುವುದಾಗಿ ಹೆದರಿಸುತ್ತಿದ್ದಾನೆ ಎಂದು ರಾಖಿ ಹೇಳಿದ್ದಾರೆ.

ಇದಾದ ಕೆಲವೇ ನಿಮಿಷಗಳಲ್ಲಿ ಆದಿಲ್ 1.50 ಕೋಟಿ ರೂಪಾಯಿ ಸಾಲ ಪಡೆದುಕೊಂಡಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಸ್ವತಃ ಆದಿಲ್ ಹಣ ಪಡೆದುಕೊಂಡಿರುವ ಎಂದು ಒಪ್ಪಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.

ಅನೈತಿಕ ಸಂಬಂಧ ಮತ್ತು ಹಲ್ಲೆ ಆರೋಪ ಮೇಲೆ ಫೆಬ್ರವರಿ 7ರಂದು ಮುಂಬೈ ಓಶಿವಾರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. ಒಂದುವರೆ ದಿನಗಳ ಕಾಲ ತನಿಖೆ ನೆಡಿಸಿದ ಪೊಲೀಸರು ನಿನ್ನೆ ಆಂಧೇರಿ ಕೋರ್ಟ್‌ನಲ್ಲಿ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!