SHOCKING | ಕೇರಳದಲ್ಲಿ ಹಕ್ಕಿ ಜ್ವರ: ಏರಿಕೆಯತ್ತ ಪ್ರಕರಣಗಳು, ಆತಂಕದಲ್ಲಿ ಜನತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೋವಿಡ್ ನಿಂದ ಸಂಪೂರ್ಣ ಎಂಬಂತೆ ಚೇತರಿಸಿಕೊಂಡಿರುವ ಕೇರಳದಲ್ಲಿ ಈಗ ಮತ್ತೆ ಹಕ್ಕಿ ಸದ್ದು ಮಾಡುತ್ತಿದ್ದು, ಜನತೆ ಆತಂಕಕ್ಕೆ ಒಳಗಾಗಿದ್ದಾರೆ.

ಆರೋಗ್ಯ ಇಲಾಖೆ ಮೂಲಗಳ ಮಾಹಿತಿ ಪ್ರಕಾರ, ಕೋಟಯಂ ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ಕಾಣಿಸಿಕೊಂಡಿದ್ದು, ಇಲ್ಲಿನ ಎರಡು ಗ್ರಾಮಗಳ ನಿವಾಸಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇದರ ಬೆನ್ನಿಗೇ ರೋಗ ವ್ಯಾಪಿಸುತ್ತಿದ್ದು, ನಿಯಂತ್ರಣಕ್ಕಾಗಿ ಈ ಗ್ರಾಮಗಳ ವ್ಯಾಪ್ತಿಯ ನೂರಾರು ಕೋಳಿಗಳನ್ನು ಸಂಹಾರ ಮಾಡಲಾಗಿದೆ.

ಹಕ್ಕಿ ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಘಟನಾ ಸ್ಥಳಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಲು ಸಜ್ಜಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!