ಆಂಧ್ರದಲ್ಲಿ ಹಕ್ಕಿ ಜ್ವರ ಆತಂಕ: ಸಾವಿರಾರು ಕೋಳಿಗಳ ಹತ್ಯೆ, ಮೊಟ್ಟೆಗಳ ನಾಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಾವಿರಾರು ಕೋಳಿಗಳು ಹಾಗೂ ಮೊಟ್ಟೆಗಳನ್ನು ನಾಶ ಮಾಡಿದೆ.

ನೆಲ್ಲೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಪೌಲ್ಟ್ರಿ ಫಾರಂಗಳ ಮೇಲೆ ನಿಗಾ ವಹಿಸಲಾಗಿದೆ. ಹಕ್ಕಿ ಜ್ವರದ ಲಕ್ಷಣ ಕಂಡು ಬಂದರೆ ಕೋಳಿ ಫಾರಂನಲ್ಲಿ ಇರುವ ಎಲ್ಲ ಹಕ್ಕಿಗಳನ್ನೂ ಕೊಂದು ಮುಚ್ಚಲಾಗುತ್ತಿದೆ. ಜೊತೆಯಲ್ಲೇ ರಸ್ತೆ ಬದಿಯ ಅಂಗಡಿಗಳು, ಹೋಟೆಲ್‌ಗಳಲ್ಲಿ ಯಾವುದೇ ಕಾರಣಕ್ಕೂ ಚಿಕನ್‌ ಪದಾರ್ಥಗಳನ್ನು ತಯಾರಿ, ಮಾರಾಟ ಮಾಡದಂತೆ ನೋಟಿಸ್​ ನೀಡಲಾಗಿದೆ.

ಹೊಸದಾಗಿ ಹಕ್ಕಿ ಜ್ವರ ಪ್ರಕರಣಗಳು ನೆಲ್ಲೂರು ಜಿಲ್ಲೆಯಲ್ಲಿ ವರದಿಯಾಗಿಲ್ಲವಾದರೂ, ಯಾವುದೇ ಕಾರಣಕ್ಕೂ ಹಕ್ಕಿ ಜ್ವರ ಪಕ್ಕದ ಜಿಲ್ಲೆಗಳಿಗೆ ಹರಡದಂತೆ ತಡೆಯಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ .

ನೆಲ್ಲೂರು ಸುತ್ತಮುತ್ತ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಕೋಳಿ ಫಾರಂಗಳಲ್ಲಿ ಪರಿಶೀಲನೆ ನಡೆಸುವಂತೆ ಹಾಗೂ ಕಟ್ಟೆಚ್ಚರ ವಹಿಸುವಂತೆ ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಸೋಂಕಿತ ಹಕ್ಕಿಗಳ ಜೊತೆ ಸಂಪರ್ಕಕ್ಕೆ ಯಾರಾದ್ರೂ ಬಂದರೆ ಅವರಲ್ಲಿ ಯಾವ ರೀತಿಯ ರೋಗ ಲಕ್ಷಣಗಳು ಕಂಡು ಬರುತ್ತವೆ, ಚಿಕಿತ್ಸೆ ಹೇಗೆ ನೀಡಬೇಕು ಎಂಬುದರ ಕುರಿತಾಗಿ ಸುತ್ತೋಲೆ ಹೊರಡಿಸಲಾಗಿದೆ. ಎನ್‌5ಎನ್‌1 ಸೋಂಕನ್ನ ಹಕ್ಕಿ ಜ್ವರ ಹೊತ್ತ ತರುತ್ತದೆ. ಈ ಸೋಂಕು ಕೋಳಿಗಳಿಂದ ಮಾನವನಿಗೆ ಹರಡಬಹುದಾಗಿದೆ.

ನೆಲ್ಲೂರು ಜಿಲ್ಲೆಯಲ್ಲಿ ಫೆಬ್ರವರಿ 7 ರಂದು ಹಕ್ಕಿ ಜ್ವರದ ಮೊದಲ ಪ್ರಕರಣ ಕಂಡು ಬಂದಿತ್ತು. ನೆಲ್ಲೂರು ಜಿಲ್ಲಾಧಿಕಾರಿ ಎಂ. ಹರಿನಾರಾಯಣ ಅವರು ಕೂಡಲೇ ಸಕಲ ಕ್ರಮ ಕೈಗೊಂಡು ಸೋಂಕು ಅಕ್ಕಪಕ್ಕದ ಜಿಲ್ಲೆಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಯ್ತು ಎಂದು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!