ಕೇರಳದಲ್ಲಿ ಹಕ್ಕಿ ಜ್ವರ ಭೀತಿ​: 10,000 ಕ್ಕೂ ಹೆಚ್ಚು ಬಾತುಕೋಳಿಗಳ ಹತ್ಯೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಹಕ್ಕಿಜ್ವರ ಪೀಡಿತ ಪ್ರದೇಶಗಳಲ್ಲಿ ಕೋಳಿಗಳನ್ನು ಕೊಲ್ಲುವ ಕಾರ್ಯ ಗುರುವಾರ ಶುರುವಾಗಿದ್ದು, 10,000 ಕ್ಕೂ ಹೆಚ್ಚು ಬಾತುಕೋಳಿಗಳನ್ನು ಕೊಲ್ಲಲಾಗಿದೆ ಎನ್ನಲಾಗುತ್ತಿದೆ.
ಪೀಡಿತ ಪ್ರದೇಶದ 1 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿಗಳನ್ನು ಕೊಲ್ಲುವ ಪ್ರಕ್ರಿಯೆ ಶುಕ್ರವಾರವೂ ಮುಂದುವರಿದಿದೆ.ಸುಮಾರು 20,471 ಬಾತುಕೋಳಿಗಳನ್ನು ಕೊಲ್ಲಲಾಗುವುದು ಎನ್ನಲಾಗಿದ್ದು, ಈ ಕೆಲಸಕ್ಕೆ ಎಂಟು ಕ್ಷಿಪ್ರ ಕ್ರಿಯಾ ಪ್ರತಿಕ್ರಿಯೆ ತಂಡಗಳು ತೊಡಗಿವೆ.
ಏತನ್ಮಧ್ಯೆ, ಹಕ್ಕಿಜ್ವರದ ಹರಡುವಿಕೆಯನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಕೇರಳಕ್ಕೆ ಉನ್ನತ ಮಟ್ಟದ ತಂಡವನ್ನು ನಿಯೋಜಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!