ಪುನೀತ್ ರಾಜ್ ಕುಮಾರ್ ನಿಧನರಾಗಿ ನಾಳೆಗೆ ಒಂದು ವರ್ಷ: ಇಂದು ಮಧ್ಯರಾತ್ರಿಯಿಂದ ಅಪ್ಪುಗೆ ಗಾನ ನಮನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುನೀತ್ ರಾಜ್ ಕುಮಾರ್ ನಿಧನರಾಗಿ ನಾಳೆಗೆ ಒಂದು ವರ್ಷ ಆಗಲಿದೆ. ಈ ಹಿನ್ನಲೆಯಲ್ಲಿ ಅಪ್ಪು ಸ್ಮಾರಕದ ಬಳಿಯಲ್ಲಿ ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆಯವರೆಗೆ ಗಾನ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತರಾಗಿ 100ಕ್ಕೂ ಹೆಚ್ಚು ಗಾಯಕರು ಭಾಗವಹಿಸಿ ಅಪ್ಪು ಸ್ಮರಣೆ ಮಾಡಲಿದ್ದಾರೆ.

ನಟ ಪುನೀತ್ ಸ್ಮಾರಕ ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿ ಕರ್ನಾಟಕ ಫಿಲ್ಮ್ ಮ್ಯೂಸಿಕಲ್ ಅಸೋಸಿಯೇಷನ್ ನಿಂದ ನಟ, ಸಂಗೀತ ನಿರ್ದೇಶ ಸಾಧುಕೋಕಿಲ ನೇತೃತ್ವದಲ್ಲಿ ಇಂದು ರಾತ್ರಿಯಿಂದ ನಾಳೆಯವರೆಗೆ ಅಪ್ಪು ಸ್ಮರಣೆಯನ್ನು ಸಂಗೀತ ಸುಧೆಯ ಮೂಲಕ ಗಾನ ನಮನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಾ.ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಗೀತೆಗಳ ಗಾಯನ ಸುಧೆಯನ್ನು ಇಂದು ರಾತ್ರಿ 12 ಗಂಟೆಯಿಂದ ನಾಳೆ ರಾತ್ರಿ 12 ಗಂಟೆಯವರೆಗೆ ಹರಿಸಲಿದ್ದಾರೆ.

ಸ್ವಯಂ ಪ್ರೇರಿತವಾಗಿ ಗಾಯಕ ಹರಿಕೃಷ್ಣ, ರವಿಶಂಕರಗೌಡ, ಹರ್ಷ, ಸಂಜಿತ್ ಹೆಗ್ಡೆ, ಹೇಮಂತ್ ಸೇರಿದಂತೆ ಅನೇಕರು ಭಾಗಿಯಾಗಿ ಹಾಡಿ, ದಿವಂಗತ ಪುನೀತ್ ರಾಜ್ ಕುಮಾರ್ ಗೆ ಗಾನ ನಮನವನ್ನು ಸಲ್ಲಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಿಐಪಿ, ವಿವಿಐಪಿಗಳಿಗೂ ಯಾವುದೇ ವಿಶೇಷ ಆಸದನ ವ್ಯವಸ್ಥೆ ಕೂಡ ಮಾಡಿಲ್ಲ. ಎಲ್ಲರಿಗೂ ಸಮಾನ ಆಸನದ ವ್ಯವಸ್ಥೆಯನ್ನು ಕರ್ನಾಟಕ ಫಿಲ್ಮ್ ಮ್ಯೂಸಿಕಲ್ ಅಸೋಸಿಷೇಯನ್ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!