ಚಲಿಸುತ್ತಿದ್ದ ರೈಲಿನಲ್ಲಿ ಜನನ: ಮಗಳಿಗೆ ‘ಮಹಾಲಕ್ಷ್ಮಿ’ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಕೊಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿ ಫಾತಿಮಾ ಖಾತೂನ್ (31) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ರೈಲಿನ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಬಳಿಕ ರೈಲು ಲೋನಾವಾಲಾ ನಿಲ್ದಾಣವನ್ನು ತಲುಪಿದಾಗ, ಫಾತಿಮಾ ತನ್ನ ಪತಿ ತಯ್ಯಬ್‌ಗೆ ನೋವಿನ ಬಗ್ಗೆ ತಿಳಿಸಿದರು. ನೋವು ತುಂಬಾ ವೇಗವಾಗಿ ಜಾಸ್ತಿಯಾಗುತ್ತಿದೆ ಎಂದು ಪತಿಗೆ ಹೇಳಿದ ಫಾತಿಮಾ ರೈಲಿನ ಶೌಚಾಲಯಕ್ಕೆ ಹೋದಳು. ತಯ್ಯಬ್ ಫಾತಿಮಾಳನ್ನು ನೋಡಲು ಟಾಯ್ಲೆಟ್‌ಗೆ ಹೋದರು. ಆಗ ಆಕೆಗೆ ಹೆಣ್ಣು ಮಗು ಜನಿಸಿರುವುದು ಗೊತ್ತಾಯಿತು. ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ಫಾತಿಮಾ ಅವರಿಗೆ ಸಹಾಯ ಮಾಡಿದರು.

ಈ ಬಗ್ಗೆ ತಯ್ಯಬ್ ಕರ್ಜತ್ ಸರ್ಕಾರಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೇ ನಿಲ್ದಾಣ ತಲುಪಿದ ಕೂಡಲೇ ಫಾತಿಮಾ ಮತ್ತು ಅವರ ಕುಟುಂಬವನ್ನು ರೈಲಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯವರು ಫಾತಿಮಾ ಮತ್ತು ಅವರ ಮಗಳಿಗೆ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು. ಮೂರು ದಿನಗಳ ನಂತರ ಫಾತಿಮಾ ಮತ್ತು ಮಗುವನ್ನು ಡಿಸ್ಚಾರ್ಜ್ ಮಾಡಲಾಯಿತು. ನಂತರ ಈ ಮಗುವಿಗೆ ‘ಮಹಾಲಕ್ಷ್ಮಿ’ ಎಂದು ಹೆಸರಿಸಲಾಗಿದೆ.

ತಯ್ಯಬ್ ಪ್ರಕಾರ, ಜೂನ್ 20 ರಂದು ಪತ್ನಿಯ ಹೆರಿಗೆ ದಿನಾಂಕವಿತ್ತು. ಅವರಿಗೆ ಈಗಾಗಲೇ ಮೂವರು ಗಂಡು ಮಕ್ಕಳಿದ್ದಾರೆ. ಇಂಥ ಸಂದರ್ಭದಲ್ಲಿ ಜೂ.6ರಂದೇ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೆಣ್ಣುಮಗು ಹುಟ್ಟಿದ್ದು ಮಗುವಿಗೆ ‘ಮಹಾಲಕ್ಷ್ಮಿ’ ಎಂದು ಹೆಸರಿಡಲು ಒಂದು ಕಾರಣವಾದರೆ, ರೈಲಿನಲ್ಲಿ ತಿರುಪತಿಯಿಂದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗುತ್ತಿದ್ದ ಕೆಲವು ಪ್ರಯಾಣಿಕರು ಮಗುವನ್ನು ನೋಡಿ- ನಾವು ಲಕ್ಷ್ಮಿ ದೇವಿಯನ್ನು ನೋಡಿದೆವು ಎಂದಿದ್ದು ಮತ್ತೊಂದು ಕಾರಣ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!