ಬಚ್ಚನ್ ಮನೆಯಲ್ಲಿ ಬರ್ತ್ ಡೇ ಸಂಭ್ರಮ: ಆರಾಧ್ಯಳಿಗೆ ಸಿಹಿ ಮುತ್ತು ಕೊಟ್ಟು ಶುಭಕೋರಿದ ಐಶ್ವರ್ಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವು ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್​ ಬಚ್ಚನ್ ದಂಪತಿಯ ಪುತ್ರಿ ಆರಾಧ್ಯ ಬಚ್ಚನ್ ಇಂದು 11ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.ಈ ವಿಶೇಷ ದಿನ ತಾಯಿ ಐಶ್ವರ್ಯಾ ಮಗಳೊಂದಿಗಿನ ಸುಂದರ ಫೋಟೋ ಶೇರ್ ಮಾಡಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಮಗಳ ತುಟಿಗೆ ಸಿಹಿ ಮುತ್ತು ನೀಡುವ ಮೂಲಕ ಅವರು ಹುಟ್ಟುಹಬ್ಬದ ಶುಭಾಶಯ ಕೋರಿದ ಐಶ್ವರ್ಯಾ , ‘ನನ್ನ ಪ್ರೀತಿ..ನನ್ನ ಜೀವನ..ನನ್ನ ಆರಾಧ್ಯ..ಐ ಲವ್​ ಯೂ’ ಎಂದು ಈ ಚಿತ್ರಕ್ಕೆ ಕ್ಯಾಪ್ಷನ್​ ನೀಡಿದ್ದಾರೆ.

2007ರಲ್ಲಿ ಅಭಿಷೇಕ್​ ಬಚ್ಚನ್​ ಮತ್ತು ಐಶ್ವರ್ಯಾ ರೈ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 2011ರ ನವೆಂಬರ್​ 16ರಂದು ಪುತ್ರಿ ಆರಾಧ್ಯಾ ಜನಿಸಿದಳು. ಇಂದು 11ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಗುತ್ತಿದ್ದು, ಸೆಲೆಬ್ರಿಟಿಗಳು, ಅಭಿಮಾನಿಗಳು ಆರಾಧ್ಯಾಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!