ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿರುವವರಿಗೆ, ವೋಟ್ ಮಾಡಿ ಬಂದಿರುವವರಿಗೆ ಈ ಹೊಟೇಲ್ನಲ್ಲಿ ಫ್ರೀಯಾಗಿ ಆಹಾರ ಸಿಗುತ್ತಿದೆ.
ಹೌದು, ಬೆಂಗಳೂರಿನ ನಿಸರ್ಗ ಹೊಟೇಲ್ನಲ್ಲಿ ವೋಟ್ ಮಾಡಿ ಬಂದು, ಇಂಕ್ ತೋರಿಸಿದವರಿಗೆ ಗರಿಗರಿ ಬೆಣ್ಣೆ ಮಸಾಲೆ ದೋಸೆ ಹಾಗೂ ಮೈಸೂರು ಪಾಕ್ನ್ನು ಫ್ರೀಯಾಗಿ ನೀಡಲಾಗುತ್ತಿದೆ.
ಇಷ್ಟೇ ಅಲ್ಲ, ಇದಾದ ನಂತರ ಜ್ಯೂಸ್ ಕೂಡ ಕುಡಿದು ಬಿಲ್ ನೀಡದಂತೆ ಹಾಯಾಗಿ ತೆರಳಬಹುದಾಗಿದೆ.