Wednesday, December 7, 2022

Latest Posts

ಬಿಸಾ೯ ಮುಂಡಾ ಶ್ರೇಷ್ಠ ಸ್ವಾತಂತ್ರ್ಯ ಸೇನಾನಿ: ಬಟ್ಟು ಸತ್ಯ ನಾರಾಯಣ್

ಹೊಸದಿಗಂತ ವರದಿ, ಕಲಬುರಗಿ:

ಬಿಸಾ೯ ಮುಂಡಾ ಭಾರತ ದೇಶದ ಸ್ವಾತಂತ್ರ್ಯದ ಶ್ರೇಷ್ಠ ಹೋರಾಟಗಾರ ಮತ್ತು ಬುಡಕಟ್ಟು ನಾಯಕನಾಗಿದ್ದು, ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ಭೂಕಬಳಿಕೆ ಮತ್ತು ಊಳಿಗಮಾನ್ಯ ಪದ್ಧತಿಯನ್ನು ಸ್ಥಾಪಿಸುವುದರ ವಿರುದ್ಧ ಹೋರಾಡಿದವರು ಎಂದು ಸಿಯುಕೆ,ಯ ಕುಲಪತಿ ಪ್ರೋ ಬಟ್ಟು ಸತ್ಯನಾರಾಯಣ ಹೇಳಿದರು.

ಬ್ರಿಟಿಷರ ತಪ್ಪು ಭೂ ವ್ಯವಸ್ಥೆಯಿಂದಾಗಿ ಬುಡಕಟ್ಟು ಜನಾಂಗದವರ ತಮ್ಮ ಸ್ವಂತ ಭೂಮಿಯಲ್ಲಿ ಕಾರ್ಮಿಕರಾಗುವಂತಾಯಿತು. ಮುಂಡಾ ಇದರ ವಿರುದ್ಧದ ಜನಾಂದೋಲನವನ್ನು ನಡೆಸಿದರು. ಮತ್ತು ಮುಂಡಾ ಸಾಮ್ರಾಜ್ಯವನ್ನು ಸ್ವತಂತ್ರ ಬುಡಕಟ್ಟು ಸಾಮ್ರಾಜ್ಯವೆಂದು ಘೋಷಿಸಿದರು ಎಂದರು.

ಜಾನಪದ ಮತ್ತು ಬುಡಕಟ್ಟು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಾಂಗ್‍ಶಿಬೀ ಕಿತಾನ್ ಮಾತನಾಡಿ, ಭಾರತೀಯ ಬುಡಕಟ್ಟುಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿವೆ. ಪ್ರಮುಖ ಸವಾಲುಗಳೆಂದರೆ ಜನಾಂಗೀಯ ಗುರುತಿನ ಪ್ರತಿಪಾದನೆ ಮತ್ತು ವರ್ಣಭೇದ ನೀತಿ, ನೈಸರ್ಗಿಕ ಸಂಪನ್ಮೂಲಗಳ ಮೇಲಿನ ನಿಯಂತ್ರಣದ ನಷ್ಟ ಮತ್ತು ಋಣಭಾರ, ಬಡತನ ಮತ್ತು ಮೂಲಭೂತ ಮೂಲಸೌಕರ್ಯಗಳ ಕೊರತೆ, ಸಂಪನ್ಮೂಲ ಶೋಷಣೆ ಮತ್ತು ಸ್ಥಳಾಂತರ, ಜೀವನಾಧಾರ ದುರುಪಯೋಗ ಮತ್ತು ಸಾಂಸ್ಕøತಿಕ ಗುರುತಿನ ನಷ್ಟ. ನಮ್ಮ ಬುಡಕಟ್ಟು ಜನಸಂಖ್ಯೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ನಾವು ಈ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಜಿಲೆನ್ಸ್ ಜಾಗೃತಿ ಸಪ್ತಾಹ ಆಚರಣಾ ಸಮಿತಿ ಅಧ್ಯಕ್ಷ ಪೆÇ್ರ.ಎಂ.ಎ.ಅಸ್ಲಂ, ಸಿಯುಕೆ ವಿಜಿಲೆನ್ಸ್ ಅಧಿಕಾರಿ ಡಾ.ಎಂ.ಡಿ. ಜೊಹೈರ್, ಜನಜಾತಿಯ ಗೌರವ ದಿವಸ್ ಕಾರ್ಯಕ್ರಮದ ಸಂಯೋಜಕಿ ಡಾ.ರೂಪ ಸೋನಾವಾಲ್, ಎಲ್ಲಾ ಡೀನ್‍ರು, ಮುಖ್ಯಸ್ಥರು, ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!