July 22, 2026
Wednesday, July 22, 2026
spot_img

ಸೆಲೆಬ್ರಿಟಿಗಳ ಮೇಲೆ ಮತ್ತೆ ಬಿಷ್ಣೋಯ್ ಗ್ಯಾಂಗ್ ಕಣ್ಣು?: ಸಲ್ಲು ಆಪ್ತನ ಜಿಮ್ ಮೇಲೆ ಅಟ್ಯಾಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ದೆಹಲಿಯಲ್ಲಿ ಪ್ರಸಿದ್ಧ ಗಾಯಕ, ಸಲ್ಮಾನ್ ಖಾನ್​ ಆಪ್ತ ಗುರು ರಂಧಾವಾ ಅವರ ಹೆಸರಿಗೆ ಸಂಬಂಧಿಸಿದ ಫಿಟ್‌ನೆಸ್ ಕೇಂದ್ರದ ಮೇಲೆ ನಡೆದ ಗುಂಡಿನ ದಾಳಿ ಸಂಚಲನ ಸೃಷ್ಟಿಸಿದೆ. ಪಶ್ಚಿಮ ವಿಹಾರ್ ಪ್ರದೇಶದಲ್ಲಿರುವ ಜಿಮ್‌ ಅನ್ನು ಗುರಿಯಾಗಿಸಿಕೊಂಡು ಅಪರಿಚಿತರು ಗುಂಡು ಹಾರಿಸಿದ್ದು, ಘಟನೆಯ ಬಳಿಕ ಭದ್ರತಾ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ.

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳ ದಾಳಿ

ಪ್ರಾಥಮಿಕ ಮಾಹಿತಿಯ ಪ್ರಕಾರ, ಮುಖ ಮುಚ್ಚಿಕೊಂಡಿದ್ದ ಇಬ್ಬರು ಬೈಕ್ ಸವಾರರು ಜಿಮ್‌ ಎದುರು ಬಂದು ಹಲವು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ತಕ್ಷಣವೇ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:

ಸೋಶಿಯಲ್ ಮೀಡಿಯಾದಲ್ಲಿ ಗ್ಯಾಂಗ್ ಹೊಣೆಗಾರಿಕೆ ಹೇಳಿಕೆ

ದಾಳಿಯ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧ ಹೊಂದಿದ್ದಾಗಿ ಹೇಳಿಕೊಳ್ಳುವ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದು, ಈ ದಾಳಿಯ ಹೊಣೆಗಾರಿಕೆಯನ್ನು ತಾವು ಹೊತ್ತಿದ್ದೇವೆ ಎಂದು ಹೇಳಿಕೊಂಡಿದ್ದಾನೆ. ಕೆಲವು ವೈಯಕ್ತಿಕ ಸಂಬಂಧಗಳ ಹಿನ್ನೆಲೆಯಲ್ಲೇ ಎಚ್ಚರಿಕೆ ನೀಡುವ ಉದ್ದೇಶದಿಂದ ದಾಳಿ ನಡೆಸಲಾಗಿದೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಿಸಿಟಿವಿ ದೃಶ್ಯಗಳ ಪರಿಶೀಲನೆ

ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿದ್ದಾರೆ. ಸ್ಥಳದಿಂದ ಸಿಕ್ಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !