ಬಿಟ್‌ ಕಾಯಿನ್ ಅಕ್ರಮ: ಸಾರ್ವಜನಿಕರಿಂದ ಮತ್ತಷ್ಟು ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು: ಬಿಟ್‌ ಕಾಯಿನ್ (ಬಿಟಿಸಿ) ಅಕ್ರಮದ ಬಗ್ಗೆ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು, ಪ್ರಕರಣ ಸಂಬಂಧ ಸಾರ್ವಜನಿಕರಿಂದ ಮತ್ತಷ್ಟು ದಾಖಲೆ ಸಂಗ್ರಹಿಸಲು ಮುಂದಾಗಿದ್ದಾರೆ.

ಪ್ರಕರಣ ಸಂಬಂಧ ಯಾವುದೇ ದಾಖಲೆ ಹಾಗೂ ಮಾಹಿತಿಗಳಿದ್ದರೆ ಎಸ್‌ಐಟಿ ಅಧಿಕಾರಿಗಳಿಗೆ ತಿಳಿಸಬಹುದು. ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪ್ರಕಟಣೆ ನೀಡಲಾಗಿದೆ. ಕಳೆದ ಆಗಸ್ಟ್‌ನಿಂದ ಎಸ್‌ಐಟಿ ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಕ್ರಿಪ್ಟೊ ಕರೆನ್ಸಿಯ ವ್ಯವಹಾರದ ಮಾಹಿತಿ, ಪರಾವೆಗಳಿದ್ದರೆ ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿಗೆ ನೀಡಬಹುದು. ಇ–ಮೇಲ್‌: [email protected] ಅಥವಾ 94808 00151 ವಾಟ್ಸ್‌ಆ್ಯಪ್‌ ಮಾಡಬಹುದು ಎಂದು ಕೋರಿದೆ.

ಕೆಂಪೇಗೌಡ ನಗರ ಠಾಣೆಯಲ್ಲಿ 2020–21ರಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಇತ್ತೀಚೆಗೆ ಪ್ರಮುಖ ಆರೋಪಿಗಳ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಎಸ್‌ಐಟಿ ತಂಡವು ಡಿಜಿಟಲ್‌ ದಾಖಲೆ ಹಾಗೂ ನಗದು ಜಪ್ತಿ ಮಾಡಿಕೊಂಡಿತ್ತು.
ಅಂತರರಾಷ್ಟ್ರೀಯ ಹ್ಯಾಕರ್ ಸೇರಿದಂತೆ ಸ್ಥಳೀಯ ಆರೋಪಿಗಳು, ಏಜೆನ್ಸಿಗಳ ಸರ್ವರ್ ಹ್ಯಾಕ್ ಮಾಡಿ ಬಿಟ್ ಕಾಯಿನ್‌ಗಳನ್ನು ಸಂಪಾದಿಸಿದ್ದರು. ಅದೇ ಬಿಟ್ ಕಾಯಿನ್‌ಗಳನ್ನು ಆರೋಪಿಗಳು ವರ್ಗಾವಣೆ ಮಾಡಿಸಿಕೊಂಡಿರುವ ಬಗ್ಗೆ ಎಸ್‌ಐಟಿ ತನಿಖೆ ನಡೆಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!