ಸ್ಮೋಕ್ ಬಾಂಬ್: ಬಾಗಲಕೋಟೆಯಲ್ಲೂ ಮನೋರಂಜನ್ ನ ಲಿಂಕ್?

ಹೊಸದಿಗಂತ ವರದಿ, ಬಾಗಲಕೋಟೆ:

ದೆಹಲಿಯ ಸಂಸತ್ತಿನ ಮೇಲೆ ನಡೆದ ಸ್ಮೋಕ್ ಬಾಂಬ್ ಪ್ರಕರಣದ ಆರೋಪಿ ಮನೋರಂಜನ್ ಲಿಂಕ್ ಈಗ ಬಾಗಲಕೋಟೆಗೂ ವ್ಯಾಪಿಸಿದೆ.

ದೆಹಲಿಯಿಂದ ಬಾಗಲಕೋಟೆಗೆ ಬಂದ ನಾಲ್ಕು ಜನರ ಪೊಲೀಸ್ ಅಧಿಕಾರಿಗಳ ತಂಡ ಸಂಸತ್ತಿನ ಮೇಲೆ ಸ್ಮೋಕ ಬಾಂಬ್ ಸಿಡಿಸಿದ ಮೈಸೂರಿನ ಮನೋರಂಜನ್ ಜತೆ ನಂಟು ಹೊಂದಿದ್ದ ಬಾಗಲಕೋಟೆಯ ನವನಗರದ ೩೦ ವರ್ಷದ ಸಾಯಿ ಕೃಷ್ಣ ಜಗಲಿಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಯಿಕೃಷ್ಣ ಜಗಲಿ ಬಾಗಲಕೋಟೆ ಯ ವಿದ್ಯಾಗಿರಿ ನಿವಾಸಿಯಾಗಿದ್ಸಾರೆ.ಇವರು ನಿವೃತ್ತ ಡಿವೈಎಸ್ಪಿ ಪುತ್ರರಾಗಿದ್ದಾರೆ.
ನವನಗರದ ಪೊಲೀಸ್ ಠಾಣೆಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಾಯಿ ಕೃಷ್ಣನನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿ ನಂತರ ದೆಹಲಿಗೆ ಕರೆದೊಯ್ದಿದ್ದಾರೆ.

ಆರೋಪಿ ಮನೋರಂಜನ್ ಹಾಗೂ ಸಾಯಿಕೃಷ್ಣ 2008-09ರಲ್ಲಿ ಬೆಂಗಳೂರಿನ ಬಿಐಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ರೂಮೆಟ್ ಆಗಿದ್ದರು.ಕಾಲೇಜು ಬಳಿಕ ಇಬ್ಬರೂ ದೂರವಾಣಿ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದರು‌.ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ಸಾಯಿಕೃಷ್ಣ ಮನೋರಂಜನ್ ಡೈರಿ, ಕಾಲ್ ರೆಕಾರ್ಡ್ ನೋಡಿದಾಗಿ ಬೆಳಕಿಗೆ ಅವರು ಸಂಪರ್ಕ ದಲ್ಲಿದ್ದರು ಎಂದು ಬೆಳಕಿಗೆ ಬಂದಿದೆ.ಅತೀ ಹೆಚ್ಚು ಬಾರಿ ಸಾಯಿಕೃಷ್ಣ ಜೊತೆಗೆ ಮನೋರಂಜನ್ ಸಂಪರ್ಕ ಹೊಂದಿದ್ದರು ಈ ಹಿನ್ನಲೆಯಲ್ಲಿ ಸಾಯಿಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದು ದೆಹಲಿಗೆ ಕರೆದೊಯ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!