ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 3 ವಿಕೆಟ್‌ಗಳಿಂದ ಸೌತ್ ಆಫ್ರಿಕಾ ತಂಡವನ್ನು ಸೋಲಿಸಿದೆ. ಈ ಮೂಲಕ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ಹೋರಾಟ ನಡೆಸಲಿದೆ.
ಸುಲಭ ಗುರಿಯನ್ನು ಸುಲಭವಾಗಿ ಚೇಸ್ ಮಾಡುವ ಆಸ್ಟ್ರೇಲಿಯಾ ಲೆಕ್ಕಾಚಾರ ಆರಂಭದಲ್ಲಿ ಎಡವಿದ್ದು,ಸತತ ವಿಕೆಟ್ ಪತನದಿಂದ ಕಂಗಾಲಾಗಿತ್ತು.
ಸೌತ್ ಆಫ್ರಿಕಾ ನೀಡಿದ 213 ರನ್ ಸುಲಭ ಟಾರ್ಗೆಟನ್ನು ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಅದ್ಬುತ ಬೌಲಿಂಗ್ ದಾಳಿ ಮೂಲಕ ಸೌತ್ ಆಫ್ರಿಕಾ ತಂಡವನ್ನು 212 ರನ್‌ಗೆ ಕಟ್ಟಿಹಾಕಲಾಗಿತ್ತು. ಹೀಗಾಗಿ ಆಸ್ಟ್ರೇಲಿಯಾ ಸುಲಭ ಗುರಿ ಪಡೆಯಿತು.
ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ ಜೊತೆಯಾಟದಿಂದ ಮೊದಲ ವಿಕೆಟ್‌ಗೆ 60 ರನ್ ಕಲೆಹಾಕಿತು. ಆದರೆ ಡೇವಿಡ್ ವಾರ್ನರ್ 29 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಮಿಚೆಲ್ ಮಾರ್ಶ್ ಡಕೌಟ್ ಆದರು.
ಸತತ 2 ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾ ಒತ್ತಡಕ್ಕೆ ಸಿಲುಕಿತು. ಟ್ರಾವಿಸ್ ಹೆಡ್ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಟದಿಂದ ಆಸೀಸ್ ಚೇತರಿಸಿಕೊಂಡಿತು. ಹೆಡ್ 62 ರನ್ ಸಿಡಿಸಿ ನಿರ್ಗಮಿಸಿದರು. ಮಾರ್ನಸ್ ಲಬುಶಾನೆ 18 ರನ್ ಸಿಡಿಸಿ ಔಟಾದರು. ಸುಲಭವಾಗಿ ಗುರಿ ಚೇಸ್ ಮಾಡುವ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾದಲ್ಲಿ ಆತಂಕ ಹೆಚ್ಚಾಯಿತು. ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು.ಸ್ಟೀವ್ ಸ್ಮಿತ್ 30 ರನ್ ಸಿಡಿಸಿ ಔಟಾಗುತ್ತಿದ್ದಂತೆ ಆಸ್ಟ್ರೇಲಿಯಾ ತಂಡದ ಒತ್ತಡ ಹೆಚ್ಚಾಯಿತು. ಜೋಶ್ ಇಂಗ್ಲಿಸ್ 28 ರನ್ ಸಿಡಿಸಿ ಔಟಾದರು.
ಅಂತಿಮ 60 ಎಸೆತದಲ್ಲಿ ಆಸೀಸ್ ಗೆಲುವಿಗೆ 20 ರನ್ ಅವಶ್ಯಕತೆ ಇತ್ತು. ಮಿಚೆಲ್ ಸ್ಟಾರ್ಕ್ ಹಾಗೂ ಪ್ಯಾಟ್ ಕಮಿನ್ಸ್ ಹೋರಾಟ ಆಸೀಸ್ ತಂಡದ ಕೈಹಿಡಿಯಿತು. ಸೋಲಿನ ದವಡೆಯಿಂದ ಪಾರು ಮಾಡಿತು. 47.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಗುರಿ ತಲಿಪಿತು. ಸ್ಟಾರ್ಕ್ ಅಜೇಯ 16 ರನ್ ಹಾಗೂ ಕಮಿನ್ಸ್ ಅಜೇಯ 14 ರನ್ ಸಿಡಿಸಿದರು.