ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಸವಾಲುಗಳಿಗೆ ಹಿಂಜರಿಯದಿರಿ. ಅದನ್ನು ದಿಟ್ಟವಾಗಿ ಎದುರಿಸಿ. ಅಂತಿಮವಾಗಿ ನಿಮಗೇ ಗೆಲುವು ಸಿಗಲಿದೆ. ಕೌಟುಂಬಿಕ ಸಹಕಾರ ಲಭ್ಯ.
ವೃಷಭ
ವೃತ್ತಿಗೆ ಸಂಬಂಧಿಸಿದ ಮುಖ್ಯ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸರಿಯಾಗಿ ಯೋಚಿಸಿ. ಇತರರ ಸಲಹೆಯನ್ನು ಕುರುಡಾಗಿ ಅನುಸರಿಸದಿರಿ.
ಮಿಥುನ
ಇಂದು ವೃತ್ತಿಯಲ್ಲಿ ಏಳುಬೀಳು ಎರಡನ್ನೂ ಕಾಣುವಿರಿ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ಸಂಭವ. ಆರ್ಥಿಕ ಹರಿವು ಸುಗಮವಾಗಿರದು. ಕೌಟುಂಬಿಕ ಒತ್ತಡ.
ಕಟಕ
ಉದ್ಯೋಗದಲ್ಲಿ ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಿ. ಇದರಿಂದ ಸವಾಲು ಎದುರಿಸಲು ಸಹಾಯವಾಗುವುದು. ಕೌಟುಂಬಿಕ ನೆಮ್ಮದಿ.
ಸಿಂಹ
ಇಂದಿನ ಕಾರ್ಯ ಅಪೂರ್ಣವಾಗುವುದು. ಕೌಟುಂಬಿಕ ಭಿನ್ನಮತ. ವಿದ್ಯಾರ್ಥಿಗಳು ಅಧ್ಯಯನವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.
ಕನ್ಯಾ
ಉಲ್ಲಾಸದ ದಿನ. ಬಾಕಿ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಬಂಧುಗಳ ಜತೆಗಿನ ಸಂಘರ್ಷವನ್ನು ಮಾತುಕತೆಯಿಂದ ಪರಿಹರಿಸಿರಿ.
ತುಲಾ
ವೃತ್ತಿ ಕಾರ್ಯದಲ್ಲಿ ಅನುಭವಿಗಳ ಸಲಹೆ ಪಡೆಯಿರಿ. ಇಲ್ಲವಾದರೆ ತಪ್ಪುಗಳು ಘಟಿಸಬಹುದು. ಬಂಧುಗಳಿಂದ ಅನಾದರ.
ವೃಶ್ಚಿಕ
ವೃತ್ತಿಯಲ್ಲಿ ಹೊಂದಾಣಿಕೆ ಅವಶ್ಯ. ಇಲ್ಲವಾದರೆ ಸಹೋದ್ಯೋಗಿಗಳ ಜತೆ ಸಂಘರ್ಷ ನಡೆದೀತು. ನಿಮ್ಮ ಪ್ರಾಮಾಣಿಕ ಕಾರ್ಯವನ್ನು ಎಲ್ಲರೂ ಮೆಚ್ಚಲಾರರು.
ಧನು
ವೃತ್ತಿಯಲ್ಲಿ ಎಲ್ಲರ ಜತೆ ಸೌಹಾರ್ದವಿರಲಿ. ಇದರಿಂದ ಕೆಲಸ ಸುಲಭ. ಆದಾಯದಲ್ಲಿ ಹೆಚ್ಚಳ. ಬಂಧುಗಳಿಂದ ಶುಭಸುದ್ದಿ ಕೇಳುವ ಸಂಭವವಿದೆ.
ಮಕರ
ಕಾಡುತ್ತಿದ್ದ ಆರೋಗ್ಯ ಸಮಸ್ಯೆ ನಿವಾರಣೆ. ಮಾನಸಿಕ ನಿರಾಳತೆ. ಕುಟುಂಬಸ್ಥರು ನಿಮ್ಮ ಕಾರ್ಯದಲ್ಲಿ ಸಹಕಾರ ನೀಡುವರು. ಆರ್ಥಿಕ ಉನ್ನತಿ.
ಕುಂಭ
ವೃತ್ತಿಯಲ್ಲಿ ನಿಮ್ಮ ನಿರ್ವಹಣೆ ಇತರರ ಮೆಚ್ಚುಗೆ ಪಡೆಯುವುದು. ನಿಮ್ಮ ಗುರಿ ಸಾಧಿಸಲು ಸಫಲರಾಗುವಿರಿ. ಕೌಟುಂಬಿಕ ನೆಮ್ಮದಿ.
ಮೀನ
ನಿಮ್ಮ ದೈನಂದಿನ ವ್ಯವಹಾರದಲ್ಲಿ ದೊಡ್ಡ ಬದಲಾವಣೆ ಮಾಡದಿರಿ. ಅದು ಉತ್ತಮ ಫಲ ನೀಡದು. ಹಿಂದಿನಂತೆಯೆ ನಡೆದುಕೊಳ್ಳಿ.