Sunday, October 1, 2023

Latest Posts

ಡಿಕೆ ಸುರೇಶ್ ವರ್ತನೆ ಖಂಡಿಸಿ ಹಾವೇರಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಹೊಸದಿಗಂತ ವರದಿ,ಹಾವೇರಿ:

ರಾಮನಗರದ ಕಾರ್ಯಕ್ರಮದಲ್ಲಿ ಸಚಿವ ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಸಂಸದ ಡಿ.ಕೆ.ಸುರೇಶ ಅವರ ನಡುವೆ ನಡೆದ ವಾಕ್‌ಸಮರ ಹಾಗೂ ವೇದಿಕೆಯಲ್ಲಿ ನಡೆದ ಗದ್ದಲವನ್ನು ಖಂಡಿಸಿ ಬಿಜೆಪಿ ಕಾರ್ಯರ್ಕರು ಮಂಗಳವಾರ ನಗರದ ಸಿದ್ದಪ್ಪ ಹೊಸಮನಿ ವೃತ್ತದಲ್ಲಿ ಡಿಕೆಸು ಅವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನೆಹರು ಓಲೇಕಾರ, ಡಿ.ಕೆ.ಸುರೇಶ ಅವರು ನಿಮ್ಮ ಗುಂಡಾಗಿರಿ ಪ್ರವೃತ್ತಿಯನ್ನು ಕಮ್ಮಿಮಾಡಕೊಳ್ಳಬೇಕು ಮತ್ತು ಕಾಂಗ್ರೆಸ್‌ನ ಕಾರ್ಯಕರ್ತರು ಈ ರೀತಿ ವರ್ತನೆಯನ್ನು ಮಾಡಬಾರದು. ತಕ್ಷಣವೇ ಡಿ.ಕೆ. ಸುರೇಶ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ನಮ್ಮ ರಾಜ್ಯದ ಮತಾಂತರ ಕಾಯ್ದೆಯನ್ನು ಜಾರಿಗೆ ತರುತ್ತಿರುವುದನ್ನು ಸಹಿಸಲಾರದೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧೀ ಅವರು ಈ ರೀತಿ ಗುಂಡಾಗಿರಿ ಪ್ರವೃತ್ತಿಯನ್ನು ಮಾಡಲು ಹುರದುಂಬಿಸುತ್ತಿರುವಂತೆ ಕಾಣುತ್ತಿದೆ. ಇದು ಬಿಜೆಪಿ ಇರುವವರಿಗೂ ನಿಮ್ಮ ಆಟಾಟೋಪುತನ ನಡೆಯುದಿಲ್ಲ ಎಂದು ಹೇಳಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ ಮಾತನಾಡಿ, ರಾಮನಗರ ಕ್ಷೇತ್ರ ಹಿಟ್ಲರ್ ರಾಜಕಾರಣ ಎಂದು ಪ್ರಖ್ಯಾತಿ ಪಡೆದಿತ್ತು. ಅದು ಈಗ ರಾಜ್ಯದ ಜನತೆಗೆ ಮನವರಿಕೆಯಾಯಿತು. ಇಂತ ರಾಜಕಾರಣಿ ನಮ್ಮ ರಾಜ್ಯದಲ್ಲಿ ಇರುವುದು ನಮ್ಮ ದುರ್ದೈವ ಇಗಾದರು ರಾಮನಗರದ ಜನತೆ ಎಚ್ಚರಿಕೆಯಿಂದ ಮತ ನೀಡಬೇಕು. ಇಂತ ರಾಜಕಾರಣಿಯನ್ನು ಮುಂದೆಂದಿಗೂ ರಾಜ್ಯದ ಆಡಳಿತ ವ್ಯವಸ್ಥೆಗೆ ತರಬಾರದು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ ಚಿನ್ನಣ್ಣನವರ ಮಾತನಾಡಿ, ಮುಖ್ಯಮಂತ್ರಿ ಇರುವ ಕಾರ್ಯಕ್ರಮದಲ್ಲಿ ಡಿ.ಕೆ.ಸುರೇಶ ಮತ್ತು ವಿಧಾನ ಪರಿಷತ್ ಸದಸ್ಯ ರವಿ ಅವರು ಸಚಿವರ ಮೇಲೆ ಹಲ್ಲೆ ನಡೆಸಲು ಮುಂದಾಗಿರುವುದು ಖಂಡನೀಯ ಎಂದರು.
ವಿಭಾಗಿಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಮುಳ್ಳೂರ ಮಾತನಾಡಿ, ಇಡಿ ರಾಜ್ಯವನ್ನೆ ಭಯವನ್ನು ಪಡೆಸುತ್ತಿದ್ದ ಗುಂಡಾ ಕೋತ್ವಾಲ ರಾಮಚಂದ್ರನ ಭಲಗೈ ಶಿಷ್ಯನಾದ ಡಿ.ಕೆ.ಶಿವಕುಮಾರ ಹಾಗೂ ಸಹೋದರ ಡಿ.ಕೆ.ಸುರೇಶ ಕೋತ್ವಾಲ ರಾಮಚಂದ್ರನ ಗುಂಡಾಗಿರಿ ಸಮಯದಲ್ಲಿ ಇವರು ಕೂಡಾ ಬೆಂಗಳೂರು ಜನರಿಗೆ ತುಂಬಾ ತೊಂದರೆ ಕೊಡುತ್ತಿದ್ದರು ಎಂದು ಬೆಂಗಳೂರು ಜನತೆ ಹೇಳುತ್ತಾರೆ, ಆಗಿನ ಸಮಯದಲ್ಲಿ ಬೆಂಗಳೂರಿನಲ್ಲಿರುವ ಭೂ ಮಾಫಿಯಾವನ್ನು ಡಿ.ಕೆ.ಶಿವಕುಮಾರ ಹಾಗೂ ಸಹೋದರ ಡಿ.ಕೆ.ಸುರೇಶ ನೋಡಿಕೊಳ್ಳುತ್ತಿದ್ದರು. ತದ ನಂತರ ರಾಮನಗರದಲ್ಲಿ ಗುಂಡಾಗಿರಿಯ ಮೂಲಕ ಆಡಳಿತಕ್ಕೆ ಬಂದಿರುತ್ತಾರೆ. ಇಂತ ರಾಜಕಾರಣಿಗಳು ರಾಜ್ಯಕ್ಕೆ ಬೇಕಾ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಾನಂದ ಮ್ಯಾಗೇರಿ, ಬಸವರಾಜ ಕಳಸೂರ, ಕಿರಣ ಕೋಣನವರ,
ಬಸವರಾಜ ಕೇಲಗಾರ, ಸುರೇಶ ಅಸಾದಿ, ಶಣ್ಮುಖಯ್ಯ ಮಳಿಮಠ, ಪ್ರಭು ಹಿಟ್ನಳ್ಳಿ, ರಮೇಶ ಪಾಲನಕರ, ಶಿವಕುಮಾರ ಸಂಗೂರ, ಶಿವರಾಜ ಮತ್ತಿಹಳ್ಳಿ, ಶ್ರೀಕಾಂತ ಪೂಜಾರ, ಚಂದ್ರಹಾಸ ಕ್ಯಾತಣ್ಣನವರ ಮತ್ತು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!