15 ರಾಜ್ಯಗಳಿಗೆ ಉಸ್ತುವಾರಿ ನಾಯಕರ ಘೋಷಿಸಿದ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ 15 ರಾಜ್ಯಗಳಿಗೆ ಹೊಸ ಉಸ್ತುವಾರಿಗಳನ್ನು ಘೋಷಿಸಿದೆ.

ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿಗೆ ಪಂಜಾಬ್ ರಾಜ್ಯ ಉಸ್ತುವಾರಿ ನೀಡಿದರೆ, ತ್ರಿಪುರ ಮಾಜಿ ಸಿಎಂ ಬಿಪ್ಲಬ್ ದೇಬ್‌ಗೆ ಹರ್ಯಾಣದ ಉಸ್ತುವಾರಿ ನೀಡಲಾಗಿದೆ. ಬಿಹಾರದ ಮಾಜಿ ಸಚಿವ ಮಂಗಲ್ ಪಾಂಡೆ ಇನ್ಮುಂದೆ ಪಶ್ಚಿಮ ಬಂಗಾಳದ ಉಸ್ತುವಾರಿ ನಾಯಕನಾಗಿ ಕಾರ್ಯನಿರ್ವಹಿಸಲಿದೆ. ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಈಶಾನ್ಯ ರಾಜ್ಯಗಳ ಸಂಯೋಜಕನಾಗಿ ನೇಮಕಗೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ 15 ರಾಜ್ಯಗಳ ಉಸ್ತುವಾರಿ ನಾಯಕರ ಪಟ್ಟಿ ಘೋಷಿಸಿದ್ದಾರೆ. ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವೇಡಕರ್ ಅವರಿಗೆ ಕೇರಳದ ಉಸ್ತುವಾರಿ ನೀಡಲಾಗಿದೆ. ಇನ್ನು ಮಧ್ಯಪ್ರದೇಶದ ಉಸ್ತುವಾರಿ ಸಚಿವ ವಿ ಮುರಳೀದರ್ ರಾವ್ ಅವರಿಗೆ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್ ಮುಂಡೆ ಹಾಗೂ ಲೋಕಸಭಾ ಸಂಸದ ರಾಮಶಂಕರ್ ಕಟಾರಿಯ ಅವರನ್ನು ಸಹಾಯಕ ಸಂಯೋಜಕನಾಗಿ ನೇಮಕಗೊಳಿಸಲಾಗಿದೆ. ಇನ್ನು ಸಂಸದ ಅರುಣ್ ಸಿಂಗ್ ಅವರನ್ನು ರಾಜಸ್ಥಾನದ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ತ್ರಿಪುರಾಗೆ ಸಂಸದ ಮಹೇಶ್ ಶರ್ಮಾ ಅವರನ್ನು ನೇಮಕ ಮಾಡಲಾಗಿದೆ. ಲಕ್ಷದ್ವೀಪಕ್ಕೆ ರಾಧಾ ಮೋಹನ್ ಅಗರ್ವಾಲ್, ಜಾರ್ಖಂಡ್‌ಗೆ ಲಕ್ಷ್ಮೀ ಬಾಜಪೈ, ವಿನೋದ್ ತಾವಡೆಯನ್ನು ಬಿಹಾರ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!