ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ವಿವಿಧ ರಾಜ್ಯಗಳಿಂದ ರಾಜ್ಯಸಭಾ ಉಪಚುನಾವಣೆಗೆ 12 ರಾಜ್ಯಸಭಾ ಸ್ಥಾನಗಳ ಪೈಕಿ ಒಂಬತ್ತು ಸ್ಥಾನಗಳಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ಸದ್ಯ ಬಿಜೆಪಿ ಆಡಳಿತವಿರುವ ರಾಜಸ್ಥಾನದಿಂದ ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಕಣಕ್ಕಿಳಿದಿದ್ದಾರೆ. 48 ವರ್ಷದ ನಾಯಕ ಬಿಟ್ಟು ಅವರು ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರು ಪಂಜಾಬ್‌ನ ಲೂಧಿಯಾನದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಆದರೆ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ವಿರುದ್ಧ ಸೋತರು. ಬಿಟ್ಟು ಪ್ರಸ್ತುತ ಕೇಂದ್ರ ರೈಲ್ವೆ ಮತ್ತು ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವರಾಗಿದ್ದಾರೆ.
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಕೇಂದ್ರದ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರನ್ನು ಮಧ್ಯಪ್ರದೇಶದಿಂದ ಬಿಜೆಪಿ ಕಣಕ್ಕಿಳಿಸಿದೆ. ರಾಜ್ಯಸಭಾ ಸದಸ್ಯ ಮತ್ತು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಗುನಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ ಲೋಕಸಭೆ ಸ್ಥಾನ ತೆರವಾಗಿದೆ.
ಬಿಹಾರದಿಂದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ, ಒಡಿಶಾದಿಂದ ಮಾಜಿ ಬಿಜೆಡಿ ನಾಯಕಿ ಮಮತಾ ಮೊಹಾಂತ ಮತ್ತು ತ್ರಿಪುರಾದಿಂದ ರಾಜೀಬ್ ಭಟ್ಟಾಚಾರ್ಯ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ.
ಅಭ್ಯರ್ಥಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ಅಸ್ಸಾಂ -ಮಿಷನ್ ರಂಜನ್ ದಾಸ್
ಅಸ್ಸಾಂ -ರಾಮೇಶ್ವರ ತೇಲಿ
ಬಿಹಾರ -ಮನನ್ ಕುಮಾರ್ ಮಿಶ್ರಾ
ಹರಿಯಾಣ -ಕಿರಣ್ ಚೌಧರಿ
ಮಧ್ಯಪ್ರದೇಶ -ಜಾರ್ಜ್ ಕುರಿಯನ್
ಮಹಾರಾಷ್ಟ್ರ -ಧೈರ್ಯಶೀಲ ಪಾಟೀಲ್
ಒಡಿಶಾ -ಮಮತಾ ಮೊಹಂತ
ರಾಜಸ್ಥಾನ -ಸರ್ದಾರ್ ರವನೀತ್ ಸಿಂಗ್ ಬಿಟ್ಟು
ತ್ರಿಪುರ -ರಾಜೀಬ್ ಭಟ್ಟಾಚಾರ್ಯ
ಭಾರತ ಚುನಾವಣಾ ಆಯೋಗವು(ECI) ರಾಜ್ಯಸಭೆಯಲ್ಲಿ ಖಾಲಿ ಇರುವ 12 ಸ್ಥಾನಗಳಿಗೆ ಸೆಪ್ಟೆಂಬರ್ 3 ರಂದು ಚುನಾವಣೆಯನ್ನು ನಿಗದಿಪಡಿಸಿದೆ.