ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಹಾಗೂ ಲೋಕಸಭಾ ಉಪ ಚುನಾವಣೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಿಸಿದೆ.
ಜೂನ್ 23 ರಂದು ಉತ್ತರ ಪ್ರದೇಶ, ತ್ರಿಪುರ, ಆಂಧ್ರ ಪ್ರದೇಶ, ಜಾರ್ಖಂಡ್ ಹಾಗೂ ದೆಹಲಿಯಲ್ಲಿ ಚುನಾವಣೆ ನಡೆಯಲಿದೆ. ಸಮಾಜವಾದಿ ಪಾರ್ಟಿ ತೊರೆದು ಬಿಜೆಪಿ ಸೇರಿದ ಘನಶ್ಯಾಮ್ ಲೋಧಿಗೆ ಬಿಜೆಪಿ ಉತ್ತರ ಪ್ರದೇಶದಿಂದ ಸ್ಪರ್ಧಿಸಲು ಟಿಕೆಟ್ ನೀಡಿದೆ.
ಉತ್ತರ ಪ್ರದೇಶದ ರಾಮಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಘನಶ್ಯಾಮ್ ಲೋಧಿ ಸ್ಪರ್ಧಿಸಲಿದ್ದಾರೆ. ಇತ್ತ ಅಜಮ್‌ಘಡ ಕ್ಷೇತ್ರದಿಂದ ದಿನೇಶ್ ಲಾಲ್ ಯಾದವ್ ಸ್ಪರ್ಧಿಸಲಿದ್ದಾರೆ.
ತ್ರಿಪುರ ಬೊರೊದ್ವಾಲಿ ಪಟ್ಟಣ ಕ್ಷೇತ್ರದಿಂದ ತ್ರಿಪುರ ಮುಖ್ಯಮಂತ್ರಿ ಮಾಣಿಕ್ ಶಾ ಸ್ಪರ್ಧಿಸಲಿದ್ದಾರೆ. ಇನ್ನು ಅರ್ಗತಲಾ ಕ್ಷೇತ್ರದಿಂದ ಡಾ ಅಶೋಕ್ ಸಿನ್ಹಗೆ ಬಿಜೆಪಿ ಟಿಕೆಟ್ ನೀಡಿದೆ. ಜುಬರಾಜ್‌ನಗರ ಕ್ಷೇತ್ರದಿಂದ ಮಿಲಿನಾ ದೇಬನಾಥ್‌ಗಿ ಟಿಕೆಟ್ ನೀಡಲಾಗಿದೆ.
ಆಂಧ್ರಪ್ರದೇಶ ಅಟ್ಮಾಕುರ್ ಕ್ಷೇತ್ರದಿಂದ ಗುಂಡ್ಲಪಲ್ಲಿ ಭರತ್ ಕುಮಾರ್ ಯಾದವ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಈ ಕ್ಷೇತ್ರದಿಂದ ಶಾಸಕನಾಗಿದ್ದ YSR ಕಾಂಗ್ರೆಸ್ ಮೇಕಪಾತಿ ಗೌತಮ್ ರೆಡ್ಡಿ ಅಕಾಲಿಕ ನಿಧನದಿಂದ ಉಪ ಚುನಾವಣೆ ನಡೆಯುುತ್ತಿದೆ. ಈ ಫೆಬ್ರವರಿ ತಿಂಗಳಲ್ಲಿ ಗೌತಮ್ ರೆಡ್ಡಿ ನಿಧನರಾಗಿದ್ದರು.
ದೆಹಲಿ ರಾಜಿಂದರ್ ನಗರ್ ಕ್ಷೇತ್ರದಿಂದ ರಾಜೇಶ್ ಭಾಟಿಗೆ ಟಿಕೆಟ್ ನೀಡಿದೆ. ರಾಜ್ಯಸಭೆಗೆ ಆಯ್ಕೆಯಾದ ಕಾರಣ ಆಪ್ ನಾಯಕ ರಾಘವ್ ಚಡ್ಡಾ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಜಾರ್ಖಂಡ್ ಮಂದಾರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗಂಗೋತ್ರಿ ಕುಜುರ್ ಸ್ಪರ್ಧಿಸಲಿದ್ದಾರೆ. ಮಂದಾರ್ ವಿಧಾನಸಾಭ ಚುನಾವಣೆ ಜೂನ್ 23ಕ್ಕೆ ನಡೆಯಲಿದೆ. ಸಿಬಿಐ ವಿಶೇಷ ನ್ಯಾಯಾಲಯ ಎಪ್ರಿಲ್ 8 ರಂದು ಶಾಸಕ ಬಂಧು ತಿರ್ಕೆಯನ್ನು ಅನರ್ಹಗೊಳಿಸಿತ್ತು.