Tuesday, March 28, 2023

Latest Posts

ಕಲಬುರಗಿ ಉತ್ತರ, ದಕ್ಷಿಣದಲ್ಲಿ ಬಿಜೆಪಿ ಭಜ೯ರಿ ಶಕ್ತಿ ಪ್ರದಶ೯ನ!

ಹೊಸದಿಗಂತ ವರದಿ, ಕಲಬುರಗಿ

ಕಲಬುರಗಿ ಉತ್ತರ ಮತಕ್ಷೇತ್ರ ಹಾಗೂ ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷವು ತನ್ನ ವಿಜಯ್ ಸಂಕಲ್ಪ ಯಾತ್ರೆಯೊಂದಿಗೆ ಭಜ೯ರಿಯಾದ ರೋಡ್ ಶೋ ಮಾಡುವ ಮೂಲಕ ಶಕ್ತಿ ಪ್ರದಶ೯ನ ಮಾಡಿತು.

ನಗರದ ನಗರೇಶ್ವರ ಶಾಲೆಯಿಂದ ಪ್ರಾರಂಭಗೊಂಡ ಯಾತ್ರೆ ಗೆ ಕೇಂದ್ರ ಸಚಿವರಾದ ಭಗವಂತ ಖೂಬಾ, ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವ ಬಿ.ಶ್ರೀರಾಮುಲು ಸೇರಿದಂತೆ ಇತರೆ ನಾಯಕರು ಚಾಲನೆ ನೀಡಿದರು.

ನಗರೇಶ್ವರ ಶಾಲೆ,ಹುಮನಾಬಾದ್ ಬೆಸ್,ಹಳೆ ಚೌಕ್ ಪೋಲಿಸ್ ಠಾಣೆ,ಸುಪರ್ ಮಾಕೇ೯ಟ,ಜಗತ್ ವೃತ್ತದ ಮುಖಾಂತರ ಮುಂದೆ ಸಾಗಿತು.

ಇದಕ್ಕೂ ಮುನ್ನ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಮುಖಂಡ ಚಂದು ಪಾಟೀಲ್ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಮೂತಿ೯ಗೆ ಮಾಲಾಪ೯ಣೆ ಮಾಡಿದರು.

ದಕ್ಷಿಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್ ಅವರ ಅಪಾರ ಪ್ರಮಾಣದಲ್ಲಿ ಆಗಮಿಸಿದ ಬೆಂಬಲಿಗರು ಹೆಗಲ ಮೇಲೆ ಹೊತ್ತು, ಅಪ್ಪು,ಅಪ್ಪು ಎಂದು ಜೈಕಾರ ಕೂಗಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!